• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಈ-ಶ್ರಮ್‌ ಕಾರ್ಡ್‌ ಮಾಡಿಸಿಕೊಳ್ಳಿ ಹಾಗೂ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಿರಿ.

October 14, 2021 by umamaheshwar bhat Leave a Comment

ಈ-ಶ್ರಮ್‌ ಅಥವಾ (NDUW) National National Database for Unorganised Workers (ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್) ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಮುಂಬರುವ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗಲಿದೆ.

e shram card

ಏನಿದು ಈ-ಶ್ರಮ್? ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರು, ಅಂದರೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೂ ಸೇರಿದಂತೆ, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆ ಕೆಲಸದಾವರು, ಕೃಷಿ ಕಾರ್ಮಿಕರು, ಅರ್ಚಕರು, ಅಡುಗೆ ಕೆಲಸದವರು ಹಾಗೂ ಇನ್ನೂ ಹಲವು ವರ್ಗದ ಕಾರ್ಮಿಕರನ್ನು ಒಳಗೊಂಡ ಅತಿದೊಡ್ಡ ರಾಷ್ಟ್ರೀಯ ಡೇಟಾಬೇಸ್‌ ಇದಾಗಿದೆ.

ಕೇಂದ್ರ ಸರ್ಕಾರ ಏಕೆ ಈ ಯೋಜನೆಯನ್ನು ಜಾರಿಗೆ ತಂದಿದೆ?

  • ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್‌ ನಿರ್ಮಾಣ.
  • ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನವನ್ನು ಸುಧಾರಣೆ ಮಾಡುವುದು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಮೀಸಲಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಏಕೀಕರಣಗೊಳಿಸುವುದು.
  • ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವಾಲಯಗಳು/ ಇಲಾಖೆಗಳು/ ಮಂಡಳಿಗಳು/ ಏಜೆನ್ಸಿಗಳು/ ಸಂಸ್ಥೆಗಳಂತಹ ವಿವಿಧ ಪಾಲುದಾರರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು ಹಾಗೂ ಅವರು ನಿರ್ವಹಿಸುತ್ತಿರುವ API ಗಳ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸುವುದು.
  • ವಲಸಿಗರು ಮತ್ತು ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಪ್ರಯೋಜನಗಳ ಪೋರ್ಟಬಿಲಿಟಿ.
  • ಭವಿಷ್ಯದಲ್ಲಿ ಕೋವಿಡ್ -19 ನಂತಹ ಯಾವುದೇ ರಾಷ್ಟ್ರೀಯ ಬಿಕ್ಕಟ್ಟುಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಗ್ರ ಡೇಟಾಬೇಸ್ ಒದಗಿಸುವುದು.

ಈ-ಶ್ರಮ್‌ (NDUW) ಪೋರ್ಟಲ್‌ನಲ್ಲಿ ಯಾರು ನೋಂದಾಯಿಸಿಕೊಳ್ಳಬಹುದು?

ಯಾವುದೇ ಅಸಂಘಟಿತ ಕಾರ್ಮಿಕ:

  • ವಯಸ್ಸು 16-59 ವರ್ಷಗಳ ನಡುವೆ ಇರಬೇಕು.
  • EPFO/ESIC ಅಥವಾ NPS (ಸರ್ಕಾರಿ / ಅನುದಾನಿತ) ಸದಸ್ಯರಾಗಿರಬಾರದು.

ಅಸಂಘಟಿತ ಕಾರ್ಮಿಕರು ಯಾರು?

  • ಇಎಸ್‌ಐಸಿ ಅಥವಾ ಇಪಿಎಫ್‌ಒ ಅಥವಾ ಸರ್ಕಾರಿ ಸದಸ್ಯರಲ್ಲದ ಸಂಘಟಿತ ವಲಯದ ಕಾರ್ಮಿಕ ಸೇರಿದಂತೆ ಅಸಂಘಟಿತ ವಲಯದ ಮನೆ ಕೆಲಸಗಾರ, ಸ್ವಯಂ ಉದ್ಯೋಗಿ ಅಥವಾ ಕೂಲಿ ಕೆಲಸಗಾರನಾಗಿರುವ ಯಾವುದೇ ಕಾರ್ಮಿಕ. ಉದ್ಯೋಗಿಯನ್ನು ಅಸಂಘಟಿತ ಕಾರ್ಮಿಕ ಎಂದು ಕರೆಯಲಾಗುತ್ತದೆ.

ನೋಂದಣಿಗೆ ಏನು ಬೇಕು?

  • ಆಧಾರ್‌ ಸಂಖ್ಯೆ (ಓ ಟಿ ಪಿ ಮೂಲಕ ನೋಂದಾಯಿಸಾಲು / ಸ್ವಯಂ ನೋಂದಾಯಿಸಲು ಆಧಾರ್‌ ಗೆ ಮೊಬೈಲ್‌ ಸಂಖ್ಯೆ ಜೋಡಣೆಯಾಗಿರಬೇಕು.
  • ಮೊಬೈಲ್‌ ಸಂಖ್ಯೆ
  • ಬ್ಯಾಂಕ್‌ ಪಾಸ್‌ ಬುಕ್

ಈ-ಶ್ರಮ್ ಕಾರ್ಡ್‌ ಮಾಡಿಸಿಕೊಂಡವರಿಗೆ ವರ್ಷದ ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ (PMJJBY) ಉಚಿತವಾಗಿರುತ್ತದೆ.

  • ಸ್ವಯಂ ನೋಂದಣಿಗಾಗಿ https://register.eshram.gov.in/#/user/self ಭೇಟಿನೀಡಿ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: ಮಾಹಿತಿ, ಸೇವೆ

Explore More:

About umamaheshwar bhat

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,116 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...