ಅಂಕೋಲಾ : ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಉಳವರೆಯಲ್ಲಿ ನಡೆದಿದೆ. ಉಳವರೆ ಬೋಳಕುಂಟೆ ನಿವಾಸಿ ಭೈರು ಪೊಕ್ಕಾ ಗೌಡ (50) ಹಾಗೂ ಅದೇ ಗ್ರಾಮದ ಹುರು ಕೆನ್ನೆ ಗೌಡ (29) ಇವರೇ ಬಂಧಿತ ಆರೋಪಿಗಳು. ಇವರಿಂದ 4500 ಮೌಲ್ಯದ 128 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇವರು ಭೋಳಕುಂಟೆ ನಿವಾಸಿ ಸಾಕ್ರು ನಾಗು ಗೌಡ (52) ಈತನಿಂದ ಗಂಜಾವನ್ನು ಖರೀದಿಸಿ ತರುತ್ತಿದ್ದರು ಎನ್ನಲಾಗಿದೆ. ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದಾರೆಂಬ ಝಚಿತ ಮಾಹಿತಿ ಮಾಹಿಯನ್ನಾಧರಿಸಿ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ, ಸಿ.ಪಿ.ಐ ಸಂತೋಷ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕ ಪ್ರೇಮನಗೌಡ ಪಾಟೀಲ ದಾಳಿ ನಡೆಸಿ
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದಲ್ಲಿ ಪ್ರೊ.ಪಿ.ಎಸ್.ಐ ಮುಶಾಹಿದ್ ಆಹ್ಮದ್, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಆಸಿಫ್ ಕುಂಕೂರ, ಅರುಣ ಮೇತ್ರಿ ಇದ್ದರು.
ಕಾನೂನು ಬಾಹಿರವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಬಂಧಿಸುಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಬದರೀನಾಥ ಅಭಿನಂದಿಸಿ ಪ್ರಶಂಸೆ, ವ್ಯಕ್ತಪಡಿಸಿದ್ದಾರೆ.
Leave a Comment