ಮಂಗಳೂರು : ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣುಮಗುವಿಗೆ ಜನ್ಮ ನೀಡಿದ ತಾಯಿಯ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ನೀಡಿ ಎಡವಟ್ಟು ಮಾಡಿಕೊಂಡು ಘಟನ ಅ.17 ರಂದು ಸಂಜೆ ನಡೆದಿದೆ.
ಉಡಪಿ ಜಿಲ್ಲೆಯ ಬ್ರಹ್ಮಾವರದ ಮುಸ್ತಫಾ ಅವರ ಪತ್ನಿ ಅಮ್ಬಿçನಾ ಎಂಬುವರು ಹದಿನೆಂಟು ದಿನಗಳ ಹಿಂದೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ಬಳಿಕ ಮಗುವನನ್ನು ತೋರಿಸದೆ ಹೆಣ್ಣು ಮಗು ಹೆರಿಗೆಯಾಗಿದೆ ಎಂದು ತಿಳಿಸಿದರಂತೆ. ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿದ್ದ ಮಗುವನ್ನು ನೋಡುವ ಅವಕಾಶ ಎರಡು ಬಾರಿ ತಾಯಿಯ ಸಿಕ್ಕಿದೆ.
ಈ ಸಂದರ್ಭದಲ್ಲಿ ಮಗು ಹೆಣ್ಣು ಎಂಬುದನ್ನು ಖಾತ್ರಿ ಪಡಿಸಿದ್ದಾರೆ. ಆದರೆ, ಮಗುವಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದರಿಂದ ಪೋಷಕರು ಮಗುವನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯವುದಾಗಿ ತಿಳಿಸಿದ್ದಾರೆ. ಉಡಪಿ ಜಿಲ್ಲೆಯ ಬ್ರಹ್ಮಾವರ ಆಸ್ಪತ್ರೆಗೆ ಕೊಂಡೊಯ್ದ ಅಲ್ಲಿ ಪರೀಶೀಲಿಸಿದಾಗ ಇವರ ಕೈಗೆ ಗಂಡು ಮಗು ನೀಡಲಾಗಿತ್ತು. ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಹೆರಿಗೆಯಾಗಿದ್ದು ಗಂಡು ಮಗುವಿಗೆ. ದಾಝಲೆಯಲ್ಲಿ ಬರೆದಾಗ ಹೆಣ್ಣು ಮಗು ಎಂದು ತಪ್ಪಾಗಿ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಈ ಗಂಡು ಮಗು ನಮ್ಮದಲ್ಲ. ನಮ್ಮ ಹೆಣ್ಣು ಮಗು ನಮಗೆ ನೀಡಿ ಎಂದು ಪೋಷಕರು ಆಗ್ರಹಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಅದಲು ಬದಲಾದ ಬಗ್ಗೆ ಕಂಡುಬAದರೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುದೆಂದರು.
Leave a Comment