ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ರಾಡ್ ಕಾಸ್ಟ್ ಇಂಜಿನಿಯರಿAಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್-ಬಿಇಸಿಐಎಲ್ ಮಿನಿರತ್ನ ಸಂಸ್ಥೆಯಾಗಿದ್ದು, ಪ್ರಸುತ್ತ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ವಿವಿಧ ಕಚೇರಿಗಳಲ್ಲಿ ಹಲವು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟೀವ್ (ತಿರುವನಂತಪುರ, ಲಖನೌ, ಶ್ರೀನಗರದಲ್ಲಿ ತಲಾ ಒಂದು ಸ್ಥಾನ) – 3 ಗ್ರಾಫಿಕ್ ಡಿಸೈಎನರ್ (ಹೈದರಾಬಾದ್, ಚೆನ್ನೆöÊ) – 2 ಟೆಕ್ನಿಕಲ್ ಅಸಿಸ್ಟೆಂಟ್ (ಅಹಮದಾಬಾದ್) – 1 ಹುದ್ದೆ ಇದೆ.
ಪದವಿ, ಜರ್ನಲಿಸಂ/ಮಾಸ್ ಕಮ್ಯುನಿಕೇಷನ್ನಲ್ಲಿ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ/ಬಿಟೆಕ್ ಎಂಸಿಎ, ಪದವಿ ಪಡೆದಿದ್ದು, ಅರ್ಜಿ ಸಲಿಸುವ ನಗರಗಳ ಪ್ರಾದೇಶಿಕ ಭಾಷಾ ಜ್ಞಾನ, ಸಾಮಾಜಿಕ ಮಾಧ್ಯಮಗಳ ಜ್ಞಾನ ಹಾಗೂ ವೃತ್ತಿ ಅನುಭವ ಕೇಳಲಾಗಿದೆ.
ಟೆಕ್ನಿಕಲ್ ಅಸಿಸ್ಟೆಂಟ್ಗೆ ಮಾಸಿಕ 30.000 ರೂ., ಉಳಿದ ಹುದ್ದೆಗಳಿಗೆ ಮಾಸಿಕ 36.000 ರೂ. ವೇತನ ಇದೆ. ಸಾಮಾನ್ಯ ವರ್ಗ ಇತರ ಹಿಂದುಳಿದ ವರ್ಗ ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಇನ್ನೊಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್ಸಿ, ಎಸ್ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. (ಇನ್ನೊಂದು ಹುದ್ದೆಗೆ ಅರ್ಜಿಸಲ್ಲಿಸುವುದಾದರೆ 300 ರೂ. ಪ್ರತ್ಯೇಕ)
ಅಧಿಸೂಚನೆಗೆ : https://bit.ly/3pp0W15
ಮಾಹಿತಿಗೆ : https://www.becil.com/
ಅರ್ಜಿ ಸಲ್ಲಿಸಲು ಕೊನೇ ದಿನ : 31/10/2021
Leave a Comment