ಕಾರವಾರ : ಹವಾಮಾನ ವೈಪರಿತ್ಯದಿಂದಾಗಿ ಕಣ್ಮರೆಯಾಗಿದ್ದ ಲಕ್ಷದ್ವೀಪದಲ್ಲಿ ಅಳವಡಿಸಿದ್ದ ಸಾಗರ ಹವಾಮಾನ ಸಂಶೋಧನಾ ಯಂತ್ರ ಸುಮಾರು ಎಳುನೂರು ಕಿ.ಮೀ ದೂರದಲ್ಲಿ ಕಾರವಾರದ ಮೀನುಗಾರರಿಗೆ ಪತ್ತೆಯಾಗಿದೆ.
shri devaki krishna wash point karki naka honavar contact; sachin mesta 9538529046,8310014860
ಲಕ್ಷದೀಪದಲ್ಲಿ ಅಳವಡಿಸಲಾಗಿದ್ದ ಸಾಗರ ಹವಾಮಾನದ ಮನ್ಸೂಚನೆ ಸೇರಿದಂತೆ ಇತರೆ ವರದಿಗಳನ್ನು ನೀಡುವ ದೇಶದ ಆತ್ಯಾಧುನಿಕ ಈ ಯಂತ್ರ ಹವಾಮಾನ ವೈಪರಿತ್ಯದಿಂದಾಗಿ ಅಕ್ಟೋಬರ್ ೩ ರಂದು ಕಳಚಿಕೊಂಡು ಕಣ್ಮರೆಯಾಗಿತ್ತು. ಅದು ಕೇರಳದಲ್ಲಿ ಅ. ೫ ರಂದು ಕಾಣಿಸಿಕೊಂಡಿತ್ತಾದರೂ ಯಾರೊಬ್ಬರನ್ನು ಹಿಡಿದಿಟ್ಟುಕೊಂಡಿರಲಿಲ್ಲ.
ಆದರೆ ಈ ಬಗ್ಗೆ ಮೀನುಗಾರರಿಗೆ ಯಂತ್ರದ ಪೋಟೊ ಹಾಗೂ ಅದರ ಆಕಾರದ ಬಗ್ಗೆ ಮಾಹಿತಿ ನೀಡಿ ಎಲ್ಲಾದರೂ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕೋರಲಾಗಿತ್ತು.
ಆದರಂತೆ ಯಂತ್ರ ಮಹರಾಷ್ಟçದ ಬಳಿ ಜಿಲ್ಲೆಯ ಮೀನುಗಾರರಿಗೆ ಕಾಣಿಸಿಕೊಂಡಿದ್ದು, ಗಾಳಿ ಹಾಗೂ ಸಮುದ್ರ ಅಲೆಗಳಿಗೆ ಸುಮಾರು ೭೦೦ ಕಿ.ಮೀ ದೂರ ಕ್ರಮಿಸಿದೆ. ಈ ಬಗ್ಗೆ ಮೀನುಗಾರರ ಕಾರವಾರ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು.
ಆದರಂತೆ ಯಂತ್ರವನ್ನು ಮೀನುಗರರ ಬೀಟ್ ಸಹಾಯದಲ್ಲಿ ತರಲಾಗಿದೆ. ಈ ಯಂತ್ರ ಸಮುದ್ರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಗಾಳಿಯ ವೇಗ, ದಿಕ್ಕು ಹಾಗೂ ಮಳೆಗಳ ಬಗ್ಗೆ ಮೊದಲೇ ಅರಿಯಲು ಸಹಾಯಕವಾಗಿದ್ದು, ಇದೀಗ ಮೀನುಗಾರರು ಯಮತ್ರವನ್ನು ಪತ್ತೆಹಚ್ಚಿ ಮಾಹಿತಿ ನೀಡಿದ್ದು ಅದನ್ನು ತರಲಾಗಿದೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಜಗನ್ನಾಥ ರಾಥೋಡ್ ತಿಳಿಸಿದ್ದಾರೆ.
Leave a Comment