ಶಿರಸಿ: ಅಕ್ರಮವಾಗಿ ದನ ಕಡಿಯುತ್ತಿರಯವಾಗಲೇ ಇಲ್ಲಿನ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ ಘಟನೆ ಇಲ್ಲಿನ ಗೌಡಳ್ಳಿ ಗ್ರಾಮದ ಉರ್ದು ಶಾಲೆ ಹಿಂಭಾಗದಲ್ಲಿ ನಡೆದಿದೆ. ನಜೀರ್ ಅಹಮ್ಮದ್ ಪಿಒರ್ ಸಾಬ್ ಅಬ್ದುಲ್ ವಾಹಿದ್ ಸಾಬ್ ಬಂಧಿತ ಆರೋಪಿಯಾಗಿದ್ದಾನೆ.
ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದು, ಮಾಂಸಕ್ಕಾಗಿ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾg

ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ನಿರ್ದೇಶನದAತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬಧರೀನಾಥ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧಿಕ್ಷಕ ರವಿ ಡಿ. ನಾಯ್ಕ, ಶಿರಸಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಇವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಈರಯ್ಯ ಡಿಎನ್ ನೇತೃತ್ವದಲ್ಲಿ ಸಿಬ್ಬಂದಿ ಮಹಾದೇವ ನಾಯ್ಕ, ಪ್ರದೀಪ್ ರೇವಣಕರ್, ಗಣಪತಿ ನಾಯ್ಕ, ಚೇತನ್ ಜೆಎನ್, ಸುನಿಲ್ ಹಡಲಗಿ, ಶ್ರೀದರ್ ನಾಯ್ಕ, ಆನಂದ ಬಬ್ಲಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಈ ದಾಳಿಯ ವೇಳೆಗೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಉಳಿದ ಆರೋಪಿಗಳಿಗಾಗಿ ತನಿಖೆ ಮುಂದುವರೆದಿದೆ.
Leave a Comment