ಶಿರಸಿ: ನ್ಯಾಯಾಲಯದಲ್ಲಿ ಕಾನೂನು ಸೇವೆಗಳ ಸಮಿತಿಯಲ್ಲಿ
ದಲಾಯತ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಶಿರಸಿ ಕಾನೂನು ಸೇವೆಗಳ ಸಮಿತಿಯಲ್ಲಿ ದಲಾಯತ್ ಹುದ್ದೆ ಖಾಲಿ ಇದ್ದು,
ವಾರ್ಷಿಕ ಗುತ್ತಿಗೆಯ ಮಾಸಿಕ ಸಂಚಿತ ವೇತನದ ಆಧಾರದ ಮೇಲೆ ಸ್ಥಳೀಯ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿವೃತ್ತ ಸರಕಾತಿ ನೌಕರರಿಗೆ
ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಭಾವಚಿತ್ರ ಲಗತ್ತಿಸಿದ
ಸ್ವ ಹಸ್ತಾಕ್ಷರದಲ್ಲಿ ಅರ್ಜಿ ಬರೆದು ದ್ವಿಪ್ರತಿಯೊಂದಿಗೆ ಅ.29 ರ ಒಳಗಾಗಿ
ಅರ್ಜಿಸಲ್ಲಿಸಲು ತಿಳಿಸಲಾಗಿದೆ. ಉದ್ಯೋಗ ಅವಶ್ಯವಿರುವ ಅಭ್ಯರ್ಥಿಗಳು
ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
Leave a Comment