ಭಟ್ಕಳ: ತಮಿಳುನಾಡಿನಿಂದ ಹೊರಟು ಕೊಲ್ಲೂರು ದರ್ಶನ ಮುಗಿಸಿ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಮಹೀಂದ್ರ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದವರ ಪೈಕಿ 8 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಭಟ್ಕಳದ ಸರ್ಪನಕಟ್ಟೆಯ ಹುಲಿದೇವರ ಮನೆ ಸಮೀಪ ನಡೆದಿದೆ.

ಹೆದ್ದಾರಿ ಕಾಮಗಾರಿ ಅವಾಂತರವೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಆಪಾದಿಸಿದ ಸಾರ್ವಜನಿಕರು ದಿನಕ್ಕೊಂದು ಕಡೆಗೆ ಸೂಚನಾ ಫಲಕ ಬದಲಾಯಿಸುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಟೆಂಪೋ ಪಲ್ಟಿಯಾದ ತಕ್ಷಣ ಜಮಾಯಿಸಿದ ಹಲವಾರು ಮಂದಿ ಗಾಯಗೊಂಡವರನ್ನು ಹೊರಗೆ ತೆಗೆಯಲು ಹಾಗೂ ಆಸ್ಪತ್ರೆ ಸೇರಿಸಲು ಸಹಕರಿಸಿದರು.
shri devaki krishna wash point karki naka honavar contact; sachin mesta 9538529046,8310014860
Leave a Comment