ಕಾಮಗಾರಿ ನಡೆಸಲು ಗುದ್ದಲಿ ಪೂಜೆ ಅಡ್ಡಿ ಇಲಾಖೆಯ ಅಧಿಕಾರಿಗಳಿಂದ ಗುತ್ತಿಗೆದಾರರಿಗೆ ತೊಂದರೆ ಯಾಗುತ್ತಿದೆ ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ. ನಾಯ್ಕ ಹೇಳಿದರು .
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಸರಕಾರದಿಂದ ಆದೇಶ ಸಿಕ್ಕು ಕಾಮಗಾರಿ ಆರಂಭಕ್ಕೆ ಇಲಾಖೆಯ ಅಧಿಕಾರಿಗಳು ಬಿಡುವುದಿಲ್ಲವಾಗಿದ್ದು ಕಾರಣ ಜನಪ್ರತಿನಿಧಿಗಳ ಗುದ್ದಲಿ ಪೂಜೆಯ ಬಳಿಕವೇ ಕಾಮಗಾರಿ ಆರಂಭಿಸಬೇಕೆಂಬ ಹಿಂಸೆ ಒತ್ತಡ ಬರುತ್ತಲಿದೆ.

ಒಂದು ಸರಕಾರದ ಆದೇಶದಂತೆ ಕಾಮಗಾರಿ ಆರಂಭಿಸಬೇಕೋ ಅಥವಾ ಅಧಿಕಾರಿಗಳ ಒತ್ತಡಕ್ಕೊಳಗಾಗಿ ಗುದ್ದಲಿ ಪೂಜೆಯ ತನಕ ಕಾಯಬೇಕೊ ಎಂಬುದು ಗುತ್ತಿಗೆದಾರರಿಗೆ ಅರ್ಥವಾಗುತ್ತಿಲ್ಲ ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ. ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
Leave a Comment