ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಮಗುವೊಂದು ಜನನವಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಅಂಕೋಲಾದ ಹೊನ್ನಿಕೇರಿ ಮೂಲದ ದಂಪತಿಗಳಿಗೆ ಈ ವಿಚಿತ್ರ ಮಗು ಜನನವಾಗಿದ್ದು.
ಕಳೆದ ಎಂಟು ತಿಂಗಳಿನಿಂದ ಕುಮಟಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಹಿಳೆ ಭಾನವಾರದಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಸುರಕ್ಷಿತವಾಗಿದ್ದಾರೆ. ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ಕಷ್ಟಕರವಾದ ಈ ಪ್ರಕರಣದಲ್ಲಿ ನಾರ್ಮಲ್ ಹೆರಿಗೆ ಮಾಡಿಸಿದ್ದಾರೆ.
ಈ ಮಗುವಿಗೆ ಸೀಳು ತುಟಿ, ಬೆರಳು ಕೂಡ ಅನಾಮೊಲಿ ಇದ್ದು. ತಲೆ ಇದ್ದರು ಮೆದುಳಿನ ರೀತಿಯ ಇನ್ನೊಂದು ಆರಾಕರ ಬೆನ್ನಿನ ಹಿಂಭಾಗದಲ್ಲಿ ಸೇರಿಕೊಂಡಿದೆ.
ಈ ಹಿಂದೆ ಈ ರೀತಿ ಜನ್ಮ ನೀಡಿದ ವಿಚಿತ್ರ ಮಗುವಿಗೆ ಎನ್ಸೆಫಲೋಸಿಲ್ ಎಂದು ಕರೆಯಲಾಗಿದ್ದು.ಹತ್ತು ಸಾವಿರದಲ್ಲಿ ಒಂದು ಮಗು ಈ ರೀತಿ ಕಾಯಿಲೆಯ ಮಗು ಜನನವಾಗಲಿದೆ ಎಂದು ವೈದ್ಯರು ತಿಳಿಸುತ್ತಾರೆ.
Leave a Comment