ಭಾರತೀಯ ನೌಕಾಪಡೆಯ ಮೆಟ್ರಿಕ್ ನೇಮಕಾತಿಗಾಗಿ 300 ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಭಾರತೀಯ ಪ್ರಜೆಗಳಿಂದ (ಅವಿವಾಹಿತ ಪುರುಷ) ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಏಪ್ರಿಲ್ 2022 ರಿಂದ ಆರಂಭವಾಗುವ ಕೋರ್ಸ್ ಮೂಲಕ ಭಾರತದ ಭಾರತೀಯ ನೌಕಾಪಡೆಯ ಘಟಕಗಳಲ್ಲಿ ಪೂರ್ಣ ಸಮಯದ ಆದಾರದ ಮೇಲೆ ನಿಯೋಜಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ನಲ್ಲಿ ಅಧಿಕೃತ ವೆಬ್ಸೈಟ್ಗೆ ಭೆಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಅಕ್ಟೋಬರ್ 29 ರಿಂದ ನವೆಂಬರ್ 2 ವರೆಗೆ ನಡೆಯಲಿದೆ.
ಅರ್ಹತೆ : ಅಭ್ಯರ್ಥಿಯು ಮೆಟ್ರಿಕ್ಯುಲೇಶನ್ ಪರೀಕ್ಷೆ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ /ಬೋರ್ಡ್/ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಭಾರತ ಸರ್ಕಾರದ ನೇಮಕಾತಿ ನಿಯಮಾನುಸಾರ ದೈಹಿಕ ಮತ್ತು ವೈದ್ಯಕೀಯವಾಗಿ ಫಿಟ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಅಭ್ಯರ್ಥಿಯು ಏಪ್ರಿಲ್ 1. 2002 ರಿಂದ ಮಾರ್ಚ್ 31. 2005 ರೊಳಗೆ ಜನಿಸಿರಬೇಕು. ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ನಾವಿಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಆಯ್ಕೆಯಾದ 21,700ರಿಂದ 69,100 ರೂ. ವರೆಗೆ ವೇತನವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಫಿಟ್ನೆಸ್ ಪರೀಕ್ಷೆ ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನೌಕಾಪಡೆಯ ಅಧಿಕೃತ ವೆಬ್ಸೈಟ್ http://www.rrc.wr.com/ ಗೆ ಭೇಟಿ ನೀಡಬಹುದು.
job info; Join our whatsapp group
Leave a Comment