ಹೊನ್ನಾವರ; ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮುಂದುವರೆದಿದೆ.ಗೇರುಸೊಪ್ಪಾ ಸೇತುವೆ ತಮ್ಮ ಅವಧಿಯಲ್ಲಿ ತಂದಿರುವುದು ಎಂದು ಬೊಗಳೆ ಬಿಡುವ ಶಾಸಕರು ಆದೇಶಪ್ರತಿ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಶಾಸಕ ಸುನೀಲ್ ನಾಯ್ಕಗೆ ಸವಾಲ್ ಎಸೆದಿದ್ದಾರೆ.
ತಾಲೂಕಿನ ಖರ್ವಾ ಗ್ರಾಮದ ಹರಿಜನಕೇರಿ ಸಭಾಭವನದಲ್ಲಿ ಸ್ವಾತ್ರಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗುತ್ತಾ ಬಂದರು ಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರಾಗಿಲ್ಲ. ನನ್ನ ಅವಧಿಯಲ್ಲಿ ಎಳು ಸಾವಿರ ಮನೆ ಮಂಜೂರಾಗಿತ್ತು ಆದರೆ ಇವರ ಅವಧಿಯಲ್ಲಿ ಹೊಸ ಮನೆ ತರುವುದಿರಲಿ ಮಂಜೂರಾದ ಮನೆಗಳಿಗೆ ಅನುದಾನವು ನೀಡಲಾಗಿಲ್ಲ.ತಹಶಿಲ್ದಾರ,ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಘೇರಾವ್ ಹಾಕಬೇಕು ಎಂದರು.

132 ಕಾಮಗಾರಿ 23 ಕೋಟಿ ಅನುದಾನ ತಂದಿರುವ ಬಗ್ಗೆ ರಸ್ತೆ ಬದಿಯ ಬ್ಯಾನರ್ ನೋಡಿ ನಗುಬಂದಿದೆ. ನನ್ನ ಅವಧಿಯಲ್ಲಿ ಒಂದೊಂದು ಕಾಮಗಾರಿಗೆ 20-30 ಕೋಟಿ ಅನುದಾನ ತಂದಿರುವೆ ಎಂದು ಕುಟುಕಿದರು.
ಹಿಂದೂತ್ವದ ಹೆಸರಲ್ಲಿ ಜನರ ಮಧ್ಯೆ ವಿಷಬೀಜ ಭಿತ್ತಿ ಒಡೆದು ಆಳುತ್ತಿದ್ದಾರೆ.ಹಿಂದೂ ದೇವಾಲಯ ಕೆಡಗುವ ಇವರಿಗೆ ಯಾವ ನೈತಿಕತೆಯಿಂದ ರಾಜಕೀಯ ಮಾಡುತ್ತಾರೆ ಎಂದು ಜರೆದರು.
ಅಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಲೆ ಎರಿಕೆ ಎಂದು ಬೀದಿಯಲ್ಲಿ ನಿಂತು ಬೊಬ್ಬಿರಿದ ಬಿಜೆಪಿ ಶೋಭಕ್ಕ ಈಗ ಎಲ್ಲಿ ಹೋದರು? ಎಂದು ವ್ಯಂಗ್ಯವಾಡಿದರು. ಇದು ಪೂರ್ಣಾವಧಿ ಸರ್ಕಾರವಲ್ಲ ಯಾವ ಕ್ಷಣದಲ್ಲಿಯು ಚುನಾವಣೆ ಘೋಷಣೆಯಾಗಬಹುದು ಎಂದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿರಾಜ್ಯದಿಂದ ಗೋವಾಕ್ಕೆ ಟನ್ ಗಟ್ಟಲೆ ಗೋಮಾಂಸ ರಪ್ತಾಗುತ್ತಿದೆ. ಆದರೆ ದಾರಿಯ ಮೇಲೆ ಹೋಗುವ ಆಕಳ,ಎಮ್ಮೆಯ ಹಾಲ ಕರೆದು ಕದಿಯುವ ಅಂದ ಗೋಭಕ್ತರಿಗೆ ಇದು ತಿಳಿಯುವುದಿಲ್ಲವೇ ಎಂದು ಟಿಕಿಸಿದರು.ಸೋಲಿನ ಭಯ ಹಿನ್ನಲೆ ಬಿಜೆಪಿಗರು ಚುನಾವಣೆ ಗೆಲ್ಲಲು ಪರೇಶ್ ಮೇಸ್ತ,ಮಾಗೋಡ್ ಪ್ರಕರಣ ಟೂಲ್ ಕಿಟ್ ಬಳಸಿದರು ಎಂದು ಕುಟುಕಿದರು.
ಮಾಜಿ ಜಿ.ಪಂ ಸದಸ್ಯ ಕೃಷ್ಣ ಗೌಡ ಮಾತನಾಡಿ ಜಾತಿ ಮದ್ಯೆ ವಿಷ ಬೀಜ ಬಿತ್ತುವ ಸಂಸ್ಕ್ರತಿ ಬಿಜೆಪಿಯದು. ಚುನಾವಣೆ ಸಮೀಪಿಸುತ್ತಿದ್ದಂತೆ ಬಡವರ ಸಾಯಿಸಿ ರಾಜಕೀಯ ಬಣ್ಣ ಹಚ್ಚಲು ಹಪಹಪಿಸುತ್ತಿದ್ದಾರೆ. ಬಿಜೆಪಿ ಬಡವರ ಪಕ್ಷವಲ್ಲ ಕಾರ್ಪೊರೇಟ್ ಉದ್ಯಮಿಗಳ ಪಕ್ಷ ಎಂದು ಲೇವಡಿ ಮಾಡಿದರು.
ಚಿತ್ರಕಲಾವಿದ ಶ್ರೀಕಾಂತ್ ನಾಯ್ಕ ಕಡಗೇರಿ ಅವರು ಮಂಕಾಳ ವೈದ್ಯರ ಭಾವಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದರು.
ವೇದಿಕೆಯಲ್ಲಿ ಮಾಜಿ ತಾ.ಪಂ ಸದಸ್ಯ ಲೋಕೇಶ್ ನಾಯ್ಕ, ಖರ್ವಾ ಗ್ರಾ.ಪಂ ಅಧ್ಯಕ್ಷೆ ಭವಾನಿ ಗೌಡ,ಉಪಾಧ್ಯಕ್ಷ ಶ್ರೀಧರ್ ನಾಯ್ಕ ಸದಸ್ಯರಾದ ರಾಮ ಗೌಡ, ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಐವಿ ನಾಯ್ಕ, ನಾಗರಾಜ ಹಳ್ಳೆರ್ ಮತ್ತಿತರಿದ್ದರು.
Leave a Comment