ಶಿರಸಿ : ತಾಲೂಕಿನ ಗೌಡಳ್ಳಿಯಲ್ಲಿ ಅಕ್ರಮವಾಗಿ ದನವನ್ನು ಕಡಿದ ಪ್ರಕರಣಕ್ಕೆ ಸಂಬAಧಿಸಿ ಮುಖ್ಯ ಆರೋಪಿ ಗೌಡಳ್ಳಿಯ ಅಬ್ದುಲ್ ಮತ್ತಲಿಬ್ ತಂದೆ ಅಬ್ದುಲ್ ರೆಹಮಾನ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಈತನು ಗೌಡಳ್ಳಿಯ ಉರ್ದು ಶಾಲೆಯ ಹಿಂಭಾಗದ ಕಾಡಿನಲ್ಲಿ ಆಕಳನ್ನು ಕಡಿದ ಆರೋಪ ಎದುರಿಸುತ್ತಿದ್ದ. ಇತನ ಜೊತೆಗಿದ್ದ ಇನ್ನೊರ್ವ ಆರೋಪಿಯನ್ನು ಪೋಲಿಸರು ಕೆಲ ದಿನಗಳ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ಬಂಧಿಸಿದ್ದರು. ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.
Leave a Comment