ಹುಬ್ಬಳ್ಳಿ : ಇಲ್ಲಿನ ತೋಳನಕೆರೆ ಹತ್ತಿರ ಗಾಂಜಾ ಸೇವನೆ ಮಾಡುತ್ತಿದ್ದ ಎಂಜಿನೀಯರಿAಗ್ ಹಾಗೂ ಎಂಬಿಎ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಮಾಜಾ ಮಕ್ಸೂದ್ ಮೋಮಿನ್ದಾದಾ, ಇರ್ಫಾನ್ ಆಯುಬ್ ಅತ್ತಾರ, ಅಯ್ಯದ್ ಸುಲೇಮಾನ್ ಶೇರ್ಅಲಿ ಸಯ್ಯದ್ ಹಾಗೂ ಗಜಾನನ ಶಿವಾನಂದ ಬೆಳಧಡಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ 75 ಗ್ರಾಂ ಗಾಂಜಾ ಹಾಗೂ ಗಾಂಜಾ ಸೇವನೆ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮೂರು ಮೊಬೈಲ್ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾದಕ ವಸ್ತುಗಳ ಮಾರಾಟಗಾರ ರಬಕವಿಯ ದಾದಾ ಎಂಬ ವೃದ್ಧನ ಬಂಧನಕ್ಕೆ ಜಾಲ ಬೀಸಲಾಗಿದೆ. ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment