ಹೊನ್ನಾವರ: ತಾಲೂಕಿನ ಯಲಗುಪ್ಪ ಗ್ರಾಮದ ಹೊನ್ನಾವರ-ಸಾಗರ ರಾ.ಹೆ, ೨೦೬ರಲ್ಲಿ ಅಪಘಾತ ಮಾಡಿದ ಆರೋಪಿ ಕೆಎಸ್ಆರ್ಟಿಸಿ ಬಸ್ ಚಾಲಕ ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ಗಂಗಾಧರ ಗಣಪತಿ ನಾಯ್ಕ ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಜಿ. ಯವರು ಆರೋಪಿತನಿಗೆ ವಿಚಾರಣೆ ನಡೆಸಿ ೨ ವರ್ಷ ಜೈಲು ಶಿಕ್ಷೆ ಮತ್ತು ೨,೫೦೦ ರೂ.ದಂಡ ವಿಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಆರೋಪಿಯು ದಿನಾಂಕ: ೦೪-೧೨-೨೦೧೭ ರಂದು ಬೆಳಿಗ್ಗೆ ೧೧-೨೦ ಗಂಟೆ ಸಮಯದಲ್ಲಿ ಹೊನ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯ ಯಲಗುಪ್ಪ ಗ್ರಾಮದ ಹೊನ್ನಾವರ-ಸಾಗರ ರಾ.ಹೆ. ೨೦೬ರಲ್ಲಿ ಹೊನ್ನಾವರ ಕಡೆಯಿಂದ ಸಾಗರದ ಕಡೆಗೆ ಕೆಎಸ್ಆರ್ಟಿಸಿ ಬಸ್ನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಯಲಗುಪ್ಪ ಗ್ರಾಮದ ಬಳಿ ರಸ್ತೆ ಇಳಿಜಾರು ಮತ್ತು ತಿರುವಿನಿಂದ ಕೂಡಿದ್ದರೂ ಸಹ ಬಸ್ಸಿನ ವೇಗವನ್ನು ನಿಯಂತ್ರಿಸದೇ ಯಲಗುಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಮೋಟಾರ ಸೈಕಲ್ಗೆ ಡಿಕ್ಕಿ ಹೊಡೆದು ಮೋಟಾರ ಸೈಕಲ್ ಸವಾರ ದರ್ಶನ ಇವರಿಗೆ ಮತ್ತು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕುಮಾರಿ ಸಂಗೀತಾ ಹಾಗೂ ಪ್ರೀತಮ್’ ಸಾವಿಗೆ ಕಾರಣನಾಗಿದ್ದ.
shri devaki krishna wash point karki naka honavar contact; sachin mesta 9538529046,8310014860
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೂ ಕೂಡ ಸಾದಾ ಮತ್ತು ಗಂಭೀರ ಸ್ವರೂಪದ ಗಾಯಗಳಾಗಿತ್ತು.ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಹೊನ್ನಾವರ ಪೊಲೀಸ್ ಠಾಣೆಯ ಆಗಿನ ಎಎಸ್ಐ ಗಣೇಶ ಎಚ್. ನಾಯ್ಕ ಮತ್ತು ಆಗಿನ ಪಿಎಸ್ಐ ಆನಂದ ಮೂರ್ತಿ ಮತ್ತು ಆಗಿನ ಹೊನ್ನಾವರದ ವೃತ್ತ ನಿರೀಕ್ಷಕರಾz ಚೆಲುವರಾಜು ಬಿ. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ಕೆ. ಗೌಡ ಈ ಪ್ರಕರಣದಲ್ಲಿ ೧೨ ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.
Leave a Comment