ಭಟ್ಕಳ: ಮುರುಡೇಶ್ವರ ಕಾಯ್ಕಿಣಿ ಹೆರಾಡಿಯ ಮಠಹಿತ್ಲುವಿನ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆಯಾದ ಘಟನೆ ಬುಧವಾರ ನಡೆದಿದೆ.
ಮೃತ ವ್ಯಕ್ತಿ ಸುಮಾರು 35 ರಿಂದ 40 ವರ್ಷದವನಾಗಿದ್ದು 7 ರಿಂದ 8 ದಿನದ ಹಿಂದೆ ಮೀನುಗಾರಿಕೆಗೆ ಹೋದ ವೇಳೆ ಅರಬ್ಬಿ ಸಮುದ್ರದಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದವನು ನೀರಿನ ಅಲೆಗೆ ಸಿಲುಕಿ ಮೃತ ದೇಹ ಮಠಹಿತ್ಲುವಿನ ಸಮುದ್ರ ದಡದಲ್ಲಿ ಬಂದು ಬಿದ್ದಿದೆ.

ಮೃತ ವ್ಯಕ್ತಿ ಕಪ್ಪು ಬಣ್ಣದ ಚಡ್ಡಿ(ಸೋರ್ಟ್ಸ್), ನೀಲಿ ಕೆಂಪುಗೆರೆಯುಳ್ಳ ಹಾಫ್ ಟಿ-ಶರ್ಟ್, ಕುರಚಲು ಕಪ್ಪು ಬಣ್ಣದ ಡಾಡಿ, ಶವದ ಮುಖದ ಭಾಗ ಇರಡು ಕೈ ಬೆರಳುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಮುರುಡೇಶ್ವರ ಪೊಲೀಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
shri devaki krishna wash point karki naka honavar contact; sachin mesta 9538529046,8310014860
Leave a Comment