ಹೊನ್ನಾವರ : ತಾಲೂಕಿನಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ ನಡೆಯುತ್ತಿದ್ದು, ಪಟ್ಟಣ ಪಂಜಾಯತ್ಗೆ ಪ್ರಮಾಣ ಪತ್ರದ ತಿದ್ದುಪಡಿ ಅರ್ಜಿ ನೀಡಲು ಬಂದಾಗ ಪ್ರಮಾಣಪತ್ರದ ನೈಜತೆ ಬಹಿರಂಗಗೊAಡಿದೆ.
ಗ್ರಾಮೀಣ ಭಾಗದ ವ್ಯಕ್ತಿಯೋರ್ವ ಜನನ ಪ್ರಮಾಣ ಪತ್ರದ ತಿದ್ದುಪಡಿಗೆ ಪಟ್ಟಣ ಪಂಚಾಯತ್ಗೆ ಅರ್ಜಿ ನೀಡಲು ಬಂದ ಸಂದರ್ಭದಲ್ಲಿ ಪ್ರಮಾಣವನ್ನು ಅಲ್ಲಿಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ತಂತ್ರಾAಶದಲ್ಲಿ ಪ್ರಮಾಣ ಪತ್ರದ ನೋಂದಣಿ ಸಂಖ್ಯೆಯ ಮೂಲಕ ಹುಡುಕಿದಾಗ ಮಾಹಿತಿ ಲಭ್ಯವಾಗಿಲ್ಲ. ಅನುಮಾನ ಬಂದು ಸಿಬ್ಬಂದಿ ಕಡತಗಳಲ್ಲಿ ಹುಡಕಿ ನೋಡಿದಾಗಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ನಂತರ ಪಟ್ಟಣ ಪಂಚಾಯತ್ ಸಿಬ್ಬಂದಿ ಕಿರಿಯ ಆರೋಗ್ಯ ನಿರೀಕ್ಷಕರ ಬಳಿ ವಿಷಯ ತಿಳಿಸಿದಾಗ ಜನನ ಪ್ರಮಾಣ ಪತ್ರವನ್ನು ಸೂಕ್ಷö್ಮವಾಗಿ ಪರಿಶೀಲಿಸಿದಾಗ ನಕಲಿ ಮೊಹರ ಬಳಸಿರುವುದು ಕಂಡು ಬಂದಿದೆ.
ನAತರ ಪತ್ರದಲ್ಲಿರುವ ಬಾರ್ ಕೊಡ್ ಸ್ಕಾö್ಯನ್ ಮಾಡಿ ನೋಡಿದ್ದಾರೆ. ಅಲ್ಲಿಯೂ ನಕಲಿ ಎನ್ನುವುದು ಸಾಬೀತಾಯಿತು. ಮೇಲ್ನೋಟಕ್ಕೆ ಅಸಲಿಯೆಂಬAತೆ ಪ್ರಮಾಣ ಪತ್ರ ಸಿದ್ಧಪಡಿಸಿರುವ ಇವರನ್ನು ಅಧೊಕಾರಿಗಳು ವಿಚಾರಣೆ ನಡೆಸಿದಾಗ ನಕಲಿ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಇದಕ್ಕೆ ಸಂಬAಧಿಸಿದವರು ಮೂರು ದಿನಗಳ ಒಳಗೆ ಕಚೇರಿಗೆ ಬರಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೆವೆ ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಿರುವ ಮಾಹಿತಿಯನ್ನು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚೆರ್ಚಿಸಿದಾಗ ಎಲ್ಲಾ ಸದಸ್ಯರು ಅವರ ಮೇಲೆ ದೂರು ನೀಡಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಕಲಿ ಮೊಹರು ಬಳಕೆ
ಒಂದು ವೇಳೆ ಜನನ ಪ್ರಮಾಣ ಪತ್ರಗಳ ಮಾಹಿತಿ ಇಲಾಖೆಯ ತಂತ್ರಾAಶ ಲಭ್ಯವಿಲ್ಲದೇ ಇದ್ದಲ್ಲಿ ನಾವು ಆಸ್ಪತ್ರೆಯಿಂದ ಒಂದ ಮಾಹಿತಿಯನ್ನು ಕಡತಗಳಲ್ಲಿ ನೋಂದಾವಣಿ ಆಗಿರುತ್ತದೆ. ಇವರು ತಂದ ಪ್ರಮಾಣ ಪತ್ರವನ್ನು ತಿದ್ದುಪಡಿಮಾಡಲು ತಿಳಿಸಿದಾಗ ನಾವು ತಂತ್ರಾAಶದಲ್ಲಿ ಹುಡಕಿದಾಗ ಮಾಹಿತಿ ಇಲ್ಲದಿರುವುದರಿಂದ ಸಿಬ್ಬಂದಿಗಳು ರಿಜಿಸ್ಟರ್ನಲ್ಲಿ ಹುಡಕಿದ್ದಾರೆ ಅಲ್ಲಿಯೂ ಮಾಹಿತಿ ಸಿಗದಿದ್ದಾಗ ಅನುಮಾನ ಬಂದು ಪ್ರಮಾಣ ಪತ್ರ ಪರಶೀಲಿಸಿದಾಗ ನಕಲಿ ಮೊಹರು ಬಳಸಿರುವುದು ಕಂಡು ಬಂದಿದೆ. ಬೇರೆ ಯಾವುದೇ ಸರ್ಟಿಫಿಕೇಟ್ನ ಹೋಲೋಗ್ರಾಂ ಸ್ಟಿಕರ್ ತೆಗೆದು ಇದಕ್ಕೆ ಅಂಟಿಸಿರುವುದು ಗಮನಕ್ಕೆ ಬಂತು. ಬಾರ್ ಕೋಡ್ ಕೂಡ ನಕಲಿ ಮಾಡಿ ಅಸಲಿ ಪ್ರಮಾಣ ಪತ್ರದಂತೆ ತಯಾರಿಸಿದ್ದಾರೆ. ಈ ಬಗ್ಗೆ ಅವರು ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಕಿರಿಯ ಆರೋಗ್ಯ ನಿರೀಕ್ಷಕ ಸುನಿಲ್ ಗಾವಡಿ ತಿಳಿಸಿದ್ದಾರೆ.
Leave a Comment