ಭಟ್ಕಳ:ತನ್ನ ಮನೆಯಿಂದ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಈ ಬಗ್ಗೆ ಯುವತಿಯ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ನಾಪತ್ತೆಯಾದ ಯುವತಿಯನ್ನು ತಾರಾ ನಾರಾಯಣ ಮರಾಠಿ ಎಂದು ಗುರುತಿಸಲಾಗಿದೆ. ಈಕೆ ನವೆಂಬರ್ 5 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ಅಲ್ಲಿಗೂ ಹೋಗದೇ ಈವರೆಗೂ ಮನೆಗೆ ವಾಪಸ್ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾಳೆ .

ಈ ಕುರಿತು ಮಂಕಿಯ ಯತ್ನಳ್ಳಿ, ಆಡುಕಾಲಯ ಗ್ರಾಮದ ಯುವತಿಯ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ನಾಪತ್ತೆಯಾದ ಮಹಿಳೆಯ ತಂದೆ ಪ್ರಕರಣ ದಾಖಲಿಸಿದು ನಗರ ನಗರ ಠಾಣೆಯ ಪೋಲಿಸರು ತನಿಖೆ ಕೈಗೊಂಡಿದ್ದಾರೆ
Leave a Comment