ಹೊನ್ನಾವರ: ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿಷಯದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳೂ ಒಂದಿಲ್ಲೊಂಡು ಎಡವಟ್ಟು ಮಾಡುತ್ತಿದ್ದು, ಇದರ ವಿರುದ್ದ ಕಾಸರಕೋಡ್ ಗ್ರಾಮ ಪಂಚಾಯತಿಗೆ ಮೀನುಗಾರರು ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಟೊಂಕಾ ಭಾಗದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣವಿಷಯ ಹೈಕೋರ್ಟ ಅಂಗಲದಲ್ಲಿದ್ದು, ಇದೀಗ ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಟೊಂಕಾ ಭಾಗದದಲ್ಲಿ ಸ್ವಚ್ಚ ಮಾಡುವಂತೆ ಬಂದರು ಇಲಾಖೆ ಹಾಗೂ ಖಾಸಗಿ ವಾಣಿಜ್ಯ ಬಂದರು ಕಂಪನಿಗೆ ಪತ್ರ ಬರೆದಿರುವುದು ಮೀನುಗಾರರ ಆಕ್ರೂಶಕ್ಕೆ ಕಾರಣವಾಗಿದೆ.
ಈ ಹಿಂದೆನಿಂದಲೂ ಗ್ರಾಮಸ್ಥರು ಅದೆಷ್ಟು ಬಾರಿ ಮನವಿ ನೀಡಿ ಒತ್ತಾಯಿಸಿದರೂ ಅನುದಾನವಿಲ್ಲ ಎಂದು ಹೇಳುತ್ತಾಬಂದಿದ್ದು, ಇದೀಗ ಏಕಾಏಕಿ ಇಲಾಖೆಯ ಜೊತೆ ಬಂದರು ಕಂಪನಿಗೂ ಸೇರಿಸಿ ಬರೆದಿರುದಕ್ಕೆ ಮೀನುಗಾರರು ಆಕ್ರೋಶಭರಿತರಾದರು . ಸೋಮವಾರ ಸದಸ್ಯರ ಸಾಮನ್ಯ ಸಭೆ ನಡೆಯುವ ವೇಳೆ ಗ್ರಾಮ ಪಂಚಾಯತಿಗೆ ಆಗಮಿಸಿದ ಮೀನುಗಾರ ಮುಕಂಡರು ಹಾಗು ಮಹಿಳೆಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯತಿ ಆವರಣದ ಎದುರು ಒಂದು ಗಂಟೆಗೂ ಅಧಿಕ ಸಮಯ ನಡೆದ ವಾಕ್ಸಮರ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ವಿರುದ್ದ ದಿಕ್ಕಾರ ಕೂಗುವ ಹಂತಕ್ಕೆ ತಲುಪಿತು. ಸಭೆಗೆ ಆಗಮಿಸಿದ ಸದಸ್ಯರು ಮೌನಕ್ಕೆ ಶರಣಾದರೆ, ಇರ್ವರು ಸದಸ್ಯರು ನಮ್ಮ ಗಮನಕ್ಕೆ ತರದೇ ಈ ಕಾರ್ಯ ನಡೆಸಿದ್ದಾರೆ ಎಂದು ಆರೋಪಿಸಿದರು. ಬಡ ಮೀನುಗಾರರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಕಂಪನಿಗೆ ಮಾರಿಕೊಳ್ಳಬೇಡಿ ಎನ್ನುವ ಮಾತು ಮೀನುಗಾರರಿಂದ ಕೇಳಿ ಬಂತು. ಈಗಾಗಲೇ ನೀಡಿದ ಆದೇಶ ಮೀನುಗಾರರಿಗೆ ಮಾರಾಕವಾಗಿದ್ದರೆ, ಸಾಮನ್ಯ ಸಭೆಯಲ್ಲಿ ಚರ್ಚಿಸಿ ವಾಪಸ್ಸು ಪಡೆಯುತ್ತೇನೆ ಎಂದು ಹೇಳಿದಾಗ ಮೀನುಗಾರರ ಹೋರಾಟ ಶಾಂತವಾಯಿತು. ಮುಂದಿನ ದಿನದಲ್ಲಿ ಇಂತಹ ಬೆಳವಣೆಗೆ ಮತ್ತೆ ಮರುಕಳಿಸಿದರೇ ಉಗ್ರ ಹೋರಾಟ ನಡೆಸುದಾಗಿ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಮೀನುಗಾರ ಮುಖಂಡ ವಿವನ್ ಫರ್ನಾಂಡಿಸ್ ಮಾತನಾಡಿ ಸ್ಥಳಿಯ ಗ್ರಾಮಪಂಚಾಯತಿ ಗ್ರಾಮಸ್ಥರ ಪರವಾಗಿದ್ದು, ಗ್ರಾಮದ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ನಮ್ಮಲ್ಲಿ ಕಂಪನಿಯವರ ತಾಳಕ್ಕೆ ತಕ್ಕಂತೆ ಕುಣಿಯುವ ಹಾಗೇ ನಮಗೆ ಗೋಚರವಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಬಂದರು ನಿರ್ಮಾಣ ವಿಷಯದಲ್ಲಿ ಗ್ರಾಮಸ್ಥರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನಿಡುತ್ತಿಲ್ಲ. ಇದೀಗ ಇಲಾಖೆಗೆ ನೀಡುವ ಪತ್ರದಲ್ಲಿ ಕಂಪನಿಯ ಹೆಸರು ಹೇಳಿ ಪಂಚಾಯತಿ ಕೆಲಸಕ್ಕೆ ಮುಂದಾಗಿರುದಕ್ಕೆ ನಮ್ಮ ವಿರೋಧವಿದೆ. ನಮ್ಮಲ್ಲಿಯ ಸಮಸ್ಯೆಗೆ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಬಗೆಹರಿಸಲಿ. ಕಂಪನಿಯ ಅನುಕಂಪ ನಮಗೆ ಬೇಡ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಜಗ್ಗು ತಾಂಡೇಲ ಮಾತನಾಡಿ ಸದಸ್ಯರ ಗಮನಕ್ಕೂ ತರದೇ ಕೆಲಸ ಮಾಡಲು ಆದೇಶವಾಗುವುದು ಆಶ್ಚರ್ಯ ಮೂಡಿಸುತ್ತಿದೆ. ನಮ್ಮ ವಾರ್ಡಿನ ಇತರಡೆ ಮಸ್ಯೆ ಬಗೆಹರಿಸಲು ಹಣವಿಲ್ಲ ಎಂದು ಬೇರೆ ವಾರ್ಡಿನಲ್ಲಿ ಕೆಲಸವಾಗುತ್ತದೆ. ಇದೀಗ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಮಾಡಬೇಕಾದ ಕೆಲಸಕ್ಕೆ ಖಾಸಗಿ ವಾಣಿಜ್ಯ ಬಂದರು ಕಂಪನಿ ಮಾಡಲು ಮುಂದಾಗುತ್ತಿರುವುದನ್ನು ವಿರೋಧಿಸುತ್ತೇನೆ.
shri devaki krishna wash point karki naka honavar contact; sachin mesta 9538529046,8310014860
ಮಂಜು ಗೌಡ ಗ್ರಾಮ ಪಂಚಾಯತಿ ಅಧ್ಯಕ್ಷ ಮಾತನಾಡಿ ರಸ್ತೆಯ ಪಕ್ಕ ಮುಳ್ಳಿನ ಪೊದೆ ಬೆಳೆದಾಗ ಸದಸ್ಯರೊರ್ವರು ಸ್ವಚ್ಚಗೊಳಿಸಲು ತಿಳಿಸಿದಾಗ ಈ ಸಂಭದ ಬಂದರು ಇಲಾಖೆ ಹಾಗೂ ಪೊರ್ಟ ಕಂಪನಿಗೆ ಸಮಸ್ಯೆ ಸರಿಪಡಿಸುವಂತೆ ಪತ್ರ ಬರೆದಿದ್ದೇನೆ. ಆದರೆ ಈ ಬಗ್ಗೆ ಒಮ್ಮತ ಮೂಡದೇ ಹೋದಲ್ಲಿ ಸಾಮನ್ಯ ಸಭೆಯಲ್ಲಿ ಚರ್ಚಿಸಿ ವಾಪಸ್ಸು ಪಡೆಯುತ್ತೇನೆ. ಮುಂದೆ ವಾರ್ಢ ಸಭೆ ಹಾಗೂ ಗ್ರಾಮ ಸಭೆಯ ಮುಲಕ ಗ್ರಾಮದ ಸಮಸ್ಯೆ ಆಲಿಸುವ ಕಾರ್ಯ ಮಾಡುತ್ತೇನೆ .
ಈ ಸಂದರ್ಭದಲ್ಲಿ ಮೀನುಗಾರರಾದ ರಾಜು ತಾಂಡೇಲ್, ರಮೇಶ ತಾಂಡೇಲ್, ಗಣಪತಿ ತಾಂಡೇಲ್, ಭಾಸ್ಕರ್ ತಾಂಡೇಲ್, ಮಂಗಲಾ ತಾಂಡೇಲ್, ವಿನಯಾ ತಾಮಡೇಲ್, ಪುಷ್ಪಾ ತಾಂಡೇಲ್, ಸವಿತಾ ತಾಂಡೇಲ್ ಹರೀಶ ತಾಂಡೇಲ್ ಮತ್ತಿತರರು ಉಪಸ್ಥಿತರಿದ್ದರು.
Leave a Comment