ತಿರುವನAತಪುರ : ನೂರು ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆಯನ್ನು ಕೇರಳ ಪೊಲೀಸರು ಬಯಲಿಗೆಳೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಬೆAಗಳೂರು ಮೂಲದ ಕಂಪನಿ ಲಾಂಗ್ ರೀಚ್ ಟೆಕ್ನಾಲಜೀಸ್ ಮೂಲಕ ಸಾವಿರಾರು ಹೊಡಿಕೆದಾರರಿಂದ ಹಣವನ್ನು ಆನ್ ಲೈನ್ ಮೂಲಕ ಸಂಗ್ರಹಿಸಿ ಅದನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲಾಗಿತ್ತು. ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ವಂಚಕರು ವಿವಿಧ ಜಾಹೀರಾತುಗಳನ್ನು ನೀಡಿದ್ದರು. ಆನ್ ಲೈನ್ ಮೂಲಕ ಹಣವನ್ನೂ ಪಡೆದಿದ್ದರು.
ಬಂಧಿತರನ್ನು ಪಿಎಂ ಮಹಮ್ಮದ್ ರಿಯಾಸ್ (31), ಸಿ ಶಫಿಕ್ (30) ವಸೀಮ್, ಮುನಾವರ್ ಅಲಿ (35), ಹಾಗೂ ಮಹಮ್ಮದ್ ಶಫೀಕ್ (28) ಎಂದು ಗುತಿಸಲಾಗಿದೆ.
ಹೋಡಿಕೆದಾರರಿಗೆ ದಿನವೂ ಶೇ.2 ರಿಂದ 5 ರಷ್ಟು ಬಡ್ಡಿ ಬರುವುದಾಗಿ ನಂಬಿಸಿ, ಅವರಿಂದ ಹಣ ಪಡೆದುಕೊಂಡಿದ್ದರು. ಆದರೆ ಕೆಲವು ಹೋಡಿಕೆದಾರರಿಗೆ ಬಡ್ಡಿಯೂ ಇಲ್ಲದೇ ತಮ್ಮ ಹಣವೂ ವಾಪಸ್ಸಗದೇ ಇದ್ದಾಗ ವಂಚನೆಗೊಳಗಾಗಿದ್ದೇವೆ. ಎಂಬ ಸತ್ಯ ಅರಿವಾಗತೊಡಗಿದೆ.
ಹೋಡಿಕೆದಾರರ ಪೈಕಿ ಮಹಮ್ಮದ್ ದಿಶಾನ್ ಎಂಬಾತ ನಾಲ್ಕು ತಿಂಗಳ ಹಿಂದೆ ನೀಡಿದ್ದ ದೋರಿನ ಆಧಾರದ ಮೇರೆಗೆ ಕಣ್ಣೂರು ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದರು.
Leave a Comment