ಬೀಜಿಂಗ್ : ಭಾರತದ ಸುತ್ತಲೂ ಚಕ್ರವ್ಯೂಹ ಹಣೆಯಲು ಸಜ್ಚಾಗಿರುವ ಚೀನಾ ಇದೀಗ ಆತ್ಯಾಧುನಿಕ ಯುದ್ಧ ಹಡಗನ್ನು ಪಾಕಿಸ್ತಾನಕ್ಕೆ ನೀಡಿದೆ. ಇಷ್ಟೋಂದು ಅತ್ಯಾಧುನಿಕವಾದ ಮತ್ತು ದೊಡ್ಡ ಹಡಗನ್ನು ಚೀನಾ ರಪ್ತು ಮಾಡುತ್ತಿರುವುದು ಇದೇ ಮೊದಲು.
ಚೀನಾ ಸ್ಟೇಟ್ ಶಿಪ್ ಬ್ಯುಲ್ಡಿಂಗ್ ಕಾರ್ಪೊರೇಷನ್ ತಯಾರಿಸಿರುವ ಈ ಹಡಗು ಭಾರತದ ಗಡಿಯನ್ನು ಕಾಯಲಿದೆ. ಪಿಎನ್ಎಸ್ ತುಘ್ರಿಲ್ ಎಂದು ಈ ಹಡಗಿನ ಪಾಕಿಸ್ತಾನ ಹೆಸರಿಟ್ಟಿದೆ.
ಅತ್ಯುತ್ತಮ ನಿಗಾ ಸಮಾರ್ಥ್ಯದ ಜೊತೆಗೆ ನೆಲದಿಂದ ನೆಲಕ್ಕೆ, ನೆಲದಿಂದ ಆಕಾಶಕ್ಕೆ ಹಾಗೂ ನೀರಿನೊಳಗೆ ಶಸ್ತಾçಸ್ತç ದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ. ಶಾಂಘೈನಲ್ಲಿ ಈ ಹಡಗನ್ನು ಪಾಕ್ಗೆ ಹಸ್ತಂತರಿಸಿದ್ದು, ಅಲ್ಲಿನ ಪಾಕ್ ರಾಯಭಾರಿ ಮೊಯಿನ್ ಉಲ್ ಹಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Leave a Comment