ಚಿಕ್ಕಮಗಳೂರು : ಮಗನ ಪ್ರೇಯಸಿ ಮೇಲೆ ಅಪ್ಪನೇ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಬಾಲಕಿ 10 ನೇ ತರಗತಿ ಓದುತ್ತಿದ್ದು, ಆರೋಪಿಯನ್ನು ಸ್ಥಳೀಯ ಠಾಣಾ ಪೋಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಸಂಬAಧಿಕರ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ಅಮ್ಮನ ಮನೆಗೆ ಬಂದವಳು ಮರುದಿನ ಶಾಲೆಮುಗಿಸಿ ಅತ್ತೆ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಳು.
ಇತ್ತ ಅದೇ ದಿನ ಮನೆಗೆ ಆಕೆ ಬಂದಿಲ್ಲ ಎಂದು ಸಂಬAಧಿಕರು ಬಾಲಕಿ ತಾಯಿಯ ಪೋನ್ ಮಾಡಿದ್ದರು. ತಾಯಿ ವಿಚಾರಿಸಿದಾಗ ಬಾಲಕಿ ಶಾಲೆಗೆ ಹೋಗದೇ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವಕನ ಮನೆಗೆ ಹೋಗಿರುವುದಾಗಿ ತಾಯಿಗೆ ಗೊತ್ತಾಗಿದೆ. ಬಳಿಕ ಆಕೆಯನ್ನು ತಾಯಿ ಮನೆಗೆ ಕರೆ ತಂದಿದ್ದಾಳೆ.
ಮನೆಗೆ ಬಂದು ವಿಚಾರಿಸಿದಾಗ ಬಾಲಕಿ ನಾನು ಎರಡು ವರ್ಷದಿಂದ ಪ್ರೀತಿಸುತ್ತಿದ್ದವನ ಮನೆಗೆ ಹೋಗಿದೆ. ಆತ ಮನೆಯಲ್ಲಿ ಇರಲಿಲ್ಲ. ಪೋನ್ ಮಾಡಿದರೂ ಸಂಪರ್ಕ ಸಿಗಲಿಲ್ಲ. ಮನೆಯಲ್ಲಿ ಆತನ ತಂದೆ ಇದ್ದರು. ಅವರು ನನ್ನಗೆ ಇಲ್ಲಿಯೇ ಇರು ಮಗ ನಾಳೆ ಬರುತ್ತಾನೆಂದು ಬಲವಂತನಾಗಿ ಉಳಸಿಕೊಂಡು, ಮಲಗಿದ್ದ ವೇಳೆ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ.
ಬಾಲಕಿ ತಾಯಿ ಆರೋಪಿ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Leave a Comment