ಅಂಕೋಲಾ :ಪಟ್ಟಣದ ಗಂಗಾ ಕ್ಲಿನಿಕ್ ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ ನೀಡುತ್ತಿದ್ದು ಅಲ್ಲದೆ ರೋಗಿಗಳಿಗೆ ಸಲೈನ್ ನೀಡುತ್ತಿರುವ ಸಂರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ.

ಅಂಕೋಲಾ ತಾಲೂಕಿನಲ್ಲಿನ ಖಾಸಗಿ ಆಸ್ಪತ್ರೆ ಗಂಗಾ ಕ್ಲಿನಿಕ್ ಮೇಲೆ ತಾಲೂಕಾ ವೈದ್ಯಾಧಿಕಾರಿ ನಿತಿನ್ ಹೊಸ್ಮಲಕರರವರು ಇಂದು ಹಠಾತ್ ದಾಳಿ ನಡೆಸಿದರು.
ಈ ಸಂರ್ಭದಲ್ಲಿ ಕ್ಲಿನಿಕ್ನಲ್ಲಿ ಆಯರ್ವೇದಿಕ್ ವೈದ್ಯ ದುಗ್ಗಾಣಿಯವರು 6 ರೋಗಿಗಳಿಗೆ ಅಲೋಪತಿ ಸಲೈನ್ ಹಚ್ಚಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಅವರ ಆಸ್ಪತ್ರೆಯಲ್ಲಿನ ಎಲ್ಲ ಅಲೋಪತಿ ಔಷಧಗಳನ್ನು ವಶಪಡಿಸಿಕೊಂಡು ವೈದ್ಯ ದುಗ್ಗಾಣಿಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಡಿ.ಎಚ್.ಓ ಮತ್ತು ಜಿಲ್ಲಾಧಿಕಾರಿಯವರಿಗೆ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಮಾಹಿತಿಯನ್ನು ಕಳುಹಿಸಿದ್ದಾರೆ.
Leave a Comment