ಕಾರವಾರ:ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮೃತ ನವಜಾತ ಶಿಶು ಬಿಟ್ಟು ಹೋದ ಪ್ರಕರಣ ಸಂಬಂಧಿಸಿದಂತೆ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಎಂದು ತನಿಖೆಯಲ್ಲಿ ತಿಳಿದುಬಂದಿದ್ದು ಶುಕ್ರವಾರ ರಾತ್ರಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.
ಸಿಸಿ ಟಿವಿ ಆಧಾರದಲ್ಲಿ ಕಾರವಾರ ನಗರ ಪಿ.ಐ ಸಿದ್ದಪ್ಪ ಬೀಳಗಿರಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ ಐ ಸಂತೋಷ ಕುಮಾರ ಹಾಗೂ ತಂಡ ಶುಕ್ರವಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭೇದಿಸಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮಹಮ್ಮದ್ ಮಕಬೂಲ್ ಅಮ್ಮದ್ ಎಂಬಾತನೇ ಬಂಧಿತ ಆರೋಪಿ.

ಮಹಮ್ಮದ್ ಮಕಬೂಲ್ ಮೂಲತಃ ಉತ್ತರ ಪ್ರದೇಶದವನಾಗಿದ್ದು, ಸದ್ಯ ನಂದನಗದ್ದಾದಲ್ಲಿ ವಾಸಿಸುತ್ತಿದ್ದಾನೆ. ಈತ ನಗರದ ಕಾಲೇಜು ಒಂದರಲ್ಲಿ ಓದುತ್ತಿದ್ದು ಅದೇ ಕಾಲೇಜಿನಲ್ಲಿ ಓದುತ್ತಿದ್ದ ಹದಿನೇಳು ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಪ್ರೀತಿಯ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡಿಲು ಆಕೆಯನ್ನು ಬಣ್ಣದ ಮಾತುಗಳಿಂದ ಮರುಳು ಮಾಡಿ ಅತ್ಯಾಚಾರ ಎಸಗಿದ ಪರಿಣಾಮ ಆಕೆ ಗರ್ಭವತಿಯಾಗಿದ್ದಳು ಎಂದು ತಿಳಿದು ಬಂದಿದೆ.
ಈತನ ವಿರುದ್ಧ ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಾಗಿದ್ದು ನ್ಯಾಯಾಂಗ ಬಂಧನ ನೀಡಲಾಗಿದೆ. ಈ ಅಪ್ರಾಪ್ತೆಯು ಹೆರಿಗೆಯಾದ ನಂತರ ಮಗುವನ್ನು ಶೌಚಾಲಯದಲ್ಲಿ ಎಸೆದು ಹೋಗಿದ್ದಾರೊ ಅಥವಾ ಮಗುವನ್ನು ಕೊಂದು ಎಸೆದಿದ್ದಾರೊ ಎನ್ನುವ ಬಗ್ಗೆ ತನಿಖೆ ಆರಂಭಿಸಲಾಗಿದೆ
Leave a Comment