ನ್ಯೇಪಿಡಾ : ವಲಸೆ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಅಮೆರಿಕಾದ ಪತ್ರಕರ್ತ ಡ್ಯಾನಿ ಫೆನ್ಸ್ಟರ್ ಎಂಬಾತನಿಗೆ ಮ್ಯಾನ್ಮಾರ್ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮಿಲಿಡರಿ ವಿರುದ್ಧ ಬಂಡಾಯ ಏಳುವಂತೆ ಪ್ರಚೋದಿಸಿದ್ದಕ್ಕಾಗಿ ಆತನ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದನೆಯ ಅರೋಪಗಳನ್ನೂ ಕೂಡ ಇತ್ತಿಚೆಗೆ ಮಾಡಲಾಗಿದ್ದು, ನ. 16 ರಂದು ಈ ಪ್ರಕರಣದ ವಿಚರಣೆಯೂ ಆರಂಭವಾಗಲಿದೆ.
ಈ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ಜೀವಾವಧಿಯಾಗಿರುತ್ತದೆ. ಫ್ರಾಂಟಿಯರ್ ಮ್ಯಾನ್ಮಾರ್ ಎನ್ನುವ ಆನ್ ಲೈನ್ ಜಾಲತಾಣದ ನಿರ್ವಾಹಕ ಸಂಪಾದಕರಾಗಿದ್ದ ಫೆನ್ಸ್ಟರ್ ಅವರನ್ನು ಯಾಂಗೊನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಮಿಲಿಟರಿ ಕ್ಷಿಪ್ರಕ್ರಾಂತಿಯ ನಂತರ ಪ್ರಸುತ್ತ ನಿಷೇಧಕ್ಕೊಳಗಾಗಿರುವ ನ್ಯೂಸ್ ವೆಬ್ಸೈಟ್ಗೆ ಕೆಲದ ಮಾಡುತ್ತಿರುವದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಡ್ಯಾನಿ ಜಿಲೈ 2020 ರಲ್ಲೇ ಪತ್ರಿ ಕೆಗೆ ರಾಜೀನಾಮೆ ನೀಡಿರುವುದಾಗಿ ಫ್ರಂಟೀಯರ್ ತಿಳಿಸಿದೆ. ಡ್ಯಾನಿ ಈ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ದಾಗಿ ಹೇಳಿ ಉಳಿದೆಲ್ಲ ಆರೋಪ ಮಾಡಲಾಗಿದೆ.
ಆದರೆ ಅವರು ರಾಜೀನಾಮೆ ನೀಡಿದ್ದ ರಿಂದ ಆ ಆರೋಪಗಳಿಗೆ ಯಾವುದೇ ಆಧಾರ ಇರುವುದಲ್ಲಿ ಎಂದು ಹೇಳಿದೆ. ಕಳೆದ ತಿಂಗಳಷ್ಟೆ ಜಪಾನಿನ ಫ್ರೀಲ್ಯಾನ್ಸ್ ಪತ್ರಕರ್ತ ಯೂಕಿ ಕಿತಜಮಿ ಎನ್ನುವವರನ್ನು ಸುಳ್ಳು ಸುದ್ದಿ ಹರಡುತ್ತಿರುವುದಕ್ಕಾಗಿ ಬಂಧಿಸಲಾಗಿತ್ತು. ಸಾಕಷ್ಟು ಸಂಖ್ಯೆ ಸ್ಥಳೀಯ ಪತ್ರಕರ್ತರನ್ನೂ ಮ್ಯಾನ್ಮಾರ್ ಮಿಲಿಟರಿ ಆಡಳಿತ ಬಂಧಿಸಿದೆ.
Leave a Comment