ಮಂಗಳೂರು : ಪಿಯುಸಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನೆಲ್ಯಾಡಿ ಕೋಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಸೋಮವಾರ ಬೆಳ್ಳಿಗೆ ನಡೆದಿದೆ.
ಅಂಬರ್ಚೆ ನಿವಾಸಿ ಮೋಹನ ಎಂಬುವರ ಪುತ್ರಿ, ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಶ್ರೇಯಾ ಇಂದು ಬೆಳ್ಳಿಗೆತಮ್ಮ ಮನೆಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment