ಕಾರವಾರ:ರ್ನಾಟಕ ವಿಧಾನ ಪರಿಷತ್ತಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ದೈವರ್ಷಿಕ ಚುನಾವಣೆ-2021ಕ್ಕೆ ಸಂಬಂಧಿಸಿದಂತೆ ನ. 16 ರಿಂದ23ರ ವರೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರದ ನಮೂನೆಗಳನ್ನು ಪಡೆದು, ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಅಪರ ಜಿಲ್ಲಾಧಿಕಾರಿಗೆ ನ. 23 ರೊಳಗಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಅಭ್ರ್ಥಿಯ ಸಹಿತ 5 ಜನರಿಗೆ ಮಾತ್ರನಾಮ ಪತ್ರ ಸಲ್ಲಿಸಲು ಕೊಠಡಿಗೆ ಪ್ರವೇಶಿಸಲು ಅವಕಾಶವಿದೆ.

ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರನು ಅಥವಾ ಅವನ ಯಾರೇ ಸೂಚಕರುಅಥವಾಅದನ್ನು ಸಲ್ಲಿಸಲುಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಇಬ್ಬರಲ್ಲೊಬ್ಬ ಅಧಿಕಾರಿಗೆ ನ. 26 ರಂದು ಮಧ್ಯಾಹ್ನ 3 ಗಂಟೆಗೆ ಮುಂಚೆ ಸಲ್ಲಿಸಬಹುದಾಗಿದೆ.
ನಾಮ ಪತ್ರಗಳನ್ನು ಸಲ್ಲಿಸುವ ಅಭ್ರ್ಥಿಯು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದ 10 ಜನ ಮತದಾರರಿಂದ ಸೂಚಿಸಲ್ಪಟ್ಟಿರಬೇಕು. ನಾಮ ಪತ್ರ ನಮೂನೆ-2 ಇ ಎಲ್ಲ ಕಾಲಂಗಳನ್ನು ರ್ತಿ ಮಾಡಿ ಅಭ್ರ್ಥಿಯು ಸಹಿ ಮಾಡಬೇಕು. ಸಾಮಾನ್ಯ ರ್ಗದವರು 10 ಸಾವಿರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರ್ಗಕ್ಕೆ ಸೇರಿದವರು (ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯ) 5 ಸಾವಿರ ರೂ ಠೇವಣಿ ಇಡಬೇಕು.
ಅಭ್ರ್ಥಿಯು ರ್ನಾಟಕ ರಾಜ್ಯದ ಯಾವುದೇ ವಿಧಾನ ಸಭಾಕ್ಷೇತ್ರದ ಮತದಾರರಿರುವ ಬಗ್ಗೆ ಸಂಬಂಧಿಸಿದ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ, ಪ್ರಮಾಣ ವಚನದ ನಿಗದಿತ ನಮೂನೆಯಲ್ಲಿ 100 ರೂ. ಬಾಂಡ್ ಪೇಪರನಲ್ಲಿ ಫರ್ಮ ನಂ. 26 ದಲ್ಲಿ ಅಫಿಡಾವಿಟ್ ಫರ್ಮ್ ನಂ.26 ಎಲ್ಲ ಕಾಲಂಗಳನ್ನು ತುಂಬಿರಬೇಕು, ಎಲ್ಲಾ ಕಾಲಂ ತುಂಬಬೇಕು. ಎಲ್ಲಾ ದಾಖಲಾತಿಗಳ ಅಫಿಡೆವಿಟ್ 2 ದ್ವೀಪ್ರತಿ ಹಾಗೂ 1 ಜೇರಾಕ್ಸ್ ಪ್ರತಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment