ನವದೆಹಲಿ : ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿಯನ್ನು ಇನ್ನು ಮುಂದೆ ನಾಣ್ಯದ ರೀತಿ ಚಲಾವಣೆಗೆ ಅವಕಾಶವಿಲ್ಲ. ಚಿನ್ನ, ಶೇರು ಮತ್ತು ಬಾಂಡ್ಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳುವಂತೆ ಇದನ್ನೂ ಪಡೆಯಬಹುದು.

ಈ ರೀತಿ ಹೊಸ ಶಾಸನವನ್ನು ತರಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಬಿಟ್ ಕಾಯಿನ್ ಹಗರಣ ಅಧಿಕಗೊಂಡ ಮೇಲೆ ಪ್ರಧಾನಿಯವರ ನೇತೃತ್ವ ಸಬೇ ನಡೆದಿದ್ದು, ಇದನ್ನು ನಿಯಂತ್ರಿಸಲು ಹೊಸ ಕಾಯ್ದೆ ಜಾರಿಗೆ ತರಲು ಕೇಂದ್ರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಇವುಗಳನ್ನು ಸಂಪೂರ್ಣ ನಿಷೇಧಿಸುವುದು ಸರಿಯಲ್ಲ ಎಂಬ ಭಾವನೆ ಮಾಡಿದೆ. ಸೆಬಿ ಸಂಸ್ಥಗೆ ಇದರ ನಿಯಂತ್ರಣವಹಿಸುವ ಬಗ್ಗೆ ಚಿಂತನೆ ನಡೆದಿದೆ.
ಕ್ರಿಪ್ಟೋ ವಹಿವಾಟಿನಲ್ಲಿ ತೋಡಗಿರುವವರು ಈಗಾಗಲೇ ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿ ಇದನ್ನು ಆಸ್ತಿಯ ರೀತಿ ಪರಿಣಿಸಬೇಕೆಂದು ಒತ್ತಾಯ ಮಾಡಿದೆ. ಭಾರತ ಮತ್ತು ಕ್ರಿಪ್ಟೋ ನಡುವೆ ನಂಟು ಮೊದಲಿನಿಂದಲೂ ಮುಂದುವರಿದುಕೊAಡು ಬಂದಿದೆ.
Leave a Comment