ಕಾರವಾರ:ಕಳೆದೊಂದು ವಾರದಿಂದ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವಾಗದೆ ಇದರಿಂದ ಅನೇಕ ಬೋಟುಗಳು ನಗರದ ಬೈತಖೋಲ್ ಬಂದರಿನಲ್ಲಿರುವ ಲಂಗರು ಹಾಕಿವೆ.

ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ತಮಿಳುನಾಡು, ಕೇರಳ, ಮಂಗಳೂರು, ಮಲ್ಪೆ, ಗೋವಾ ಸೇರಿದಂತೆ ಉತ್ತರ ಕನ್ನಡದದ ಬೋಟುಗಳು ಮೀನುಗಾರಿಕೆ ಮಾಡುತ್ತವೆ.
ಆದರೆ ಹವಾಮಾನ ವೈಪರೀತ್ಯದಿಂದ ಅನೇಕ ಬೋಟುಗಳು ಸುರಕ್ಷತೆ ದೃಷ್ಟಿಯಿಂದ ಬೈತಖೋಲ್ ಬಂದರು ವ್ಯಾಪ್ತಿಯಲ್ಲಿ ಲಂಗರು ಹಾಕಿದೆ. ಈಗಾಗಲೇ ಮೀನುಗಾರಿಕಾ ಇಲಾಖೆ ಸಹ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಿದೆ.
Leave a Comment