ಭಟ್ಕಳ: ಮುರ್ಡೇಶ್ವರದಿಂದಶಿರಾಲಿ ಕಡೆಗೆ ಬೈಕ್ನಲ್ಲಿ ವಿವಿಧ ಕಂಪೆನಿಯ ಬೀಯರ್ಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬೇಂಗ್ರೆ ಪೆಟ್ರೋಲ್ ಬಂಕ್ ಸನಿಹದಲ್ಲಿ ಬಂಧಿಸಿ, ವಸ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ. ಶಿರಾಲಿ ನೀರಕಂಠದ ಹೊಟೇಲ್ ಕೆಲಸ ಮಾಡುವ ಉಮೇಶ ನಾರಾಯಣ ನಾಯ್ಕ ಬಂಧಿತ ವ್ಯಕ್ತಿ.

ಈತ ಬೈಕಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ವಿವಿಧ ಕಂಪೆನಿಯ 24,620 ಮೌಲ್ಯದ ಬೀಯರ್ ಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ವಿಚಿತ ಮಾಹಿತಿಯ ಮೇರೆಗೆ ಮುರ್ಡೇಶ್ವರ ಪಿಎಸೈ ರವೀಂದ್ರ ಬಿರಾದಾರ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment