ಕುಮಟಾ : ಗೋಕರ್ಣದ ವಿವಿಧ ಹೋಟೆಲ್ ಮತ್ತು ಲಾಡ್ಜ್ಗಳ ಲೈಸನ್ಸ್ ನವೀಕರಣಕ್ಕೆ ಬಂದಿದ್ದು, ಆ ಹೊಟೆಲ್ಗಳ ಸ್ಥಿತಿಗತಿಯನ್ನು ತಹಶೀಲ್ದಾರ ವವೇಕ ಶೇಣ್ವಿ ಬೇಟಿ ನೀಡಿ ಪರಶೀಲನೆ ನಡೆಸಿದರು.
ಈ ಬಾಗದ ಒಟ್ಟೂ 10ಕ್ಕೂ ಅಧಿಕ ಹೊಟೆಲ್ಗಳನ್ನು ವೀಕ್ಷಿಸಿದ ಅವರು, ತ್ಯಾಜ್ಯದ ನೀರು ಹೊರ ಹೋಗುವುದು ಮತ್ತು ಸುರಕ್ಷತೆ ಇನ್ನಿತರ ಕುರಿತು ಮಾಲಕರಿಂದ ಮಾಹಿತಿ ಪಡೆದರು .

ನಂತರ ಮಾತನಾಡಿದ ಅವರು, ಈ ಭಾಗದಲ್ಲಿ ಸಾಕಷ್ಟು ಹೊಟೆಲ್ ಗಳಿದ್ದು, ಅನುಮತಿ ಪಡೆದ ಕೆಲವು ವಸತಿ ಗೃಹಗಳ ಅವಧಿ ಮುಗಿದಿದ್ದು, ಇದನ್ನು ಪರಿಶೀಲಿಸಿ ಲೈಸನ್ಸ್ ನವೀಕರಣ ಮಾಡುವುದಾಗಿ ತಿಳಿಸಿದರು. ಇನ್ನೂ ಅನಧಿಕೃತವಾಗಿರುವ ಬಹಳಷ್ಟು ವಸತಿ ಗೃಹಗಳ ಕುರಿತು ಮಾತನಾಡಿ, ಈಗಾಗಲೇ ನೀಟಿಸ್ ನೀಡಿದ್ದು, ಶೀಘ್ರದಲ್ಲಿ ಕ್ರಮಜರುಗಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಕಂದಾಯ ನರೀಕ್ಷಕ ಪ್ರಾಶಾಂತ ನಾಯ್ಕ, ಗ್ರಾಮಲೆಕ್ಕಾಧಿಕಾರಿ ಮಂಜಪ್ಪ ಉಪಸ್ಥಿತರಿದ್ದರು.
Leave a Comment