ಅಮೆಜಾನ್ ಶಾಪಿಂಗ್ ಆ್ಯಪ್ನಲ್ಲಿ ಮಾರುತಿ ಸ್ವಿಫ್ಟ್ ಕಾರ್ ಕವರನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬ ಬರೋಬ್ಬರಿ 7 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ಕಾರವಾರ ತಾಲೂಕಿನ ಗೋಟೆಗಾಳಿಯಿಂದ ಬೆಳಕಿಗೆ ಬಂದಿದ್ದು ಕಾರವಾರದ ಸಿ. ಇ. ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಟೆಗಾಳಿಯ ನಿವೃತ್ತ ನೌಕರ ಅರವಿಂದ ಪರಮಹಂಸ ತಿವಾರಿ ಎನ್ನುವವರು ನ.12 ರಂದು ಅಮೆಜಾನ್ ಶಾಪಿಂಗ್ ಆ್ಯಪ್ನಲ್ಲಿ ಮಾರುತಿ ಸ್ವಿಫ್ಟ್ ಕಾರ್ ಕವರನ್ನು ಆರ್ಡರ್ ಮಾಡಿದ್ದು ಅದು ನ.22 ರಂದು ಅವರಿಗೆ ತಲುಪಿರುತ್ತದೆ.
ನಂತರದಲ್ಲಿ ಅರವಿಂದ ಪರಮಹನ್ನ ತಿವಾರಿ ಅವರು ಕಾರ ಕವರನ್ನು ತನ್ನ ಕಾರ್ಗೆ ಅಳವಡಿಸಲು ಹೋದಾಗ ಅದು ಸರಿಯಾಗಿ ಹೊಂದಾಣಿಕೆ ಆಗದೇ ಇರುವುದರಿಂದ ಅಮೆಜಾನ್ದಲ್ಲಿ ಖರೀದಿಸಿದ್ದಕಾರ ಕವರನ್ನು ವಾಪಸ್ ಮಾಡುವ ಕುರಿತು ಅಮೆಜಾನ್ ಪಾರ್ಸಲ್ ಕವರ ಒಳಗಡೆ ಇದ್ದ ಕಾರ್ರವರ ಮೇಲೆ ನಮೂದಿದ್ದ ಆಟೋ ಫೆಕ್ಸ್ ಕಾರ್ ಎಕ್ಸಸೋರಿಯಸ್ ಕಂಪನಿಯ ಕಾಂಟೆಕ್ಸ್ನಂಬರ್ ಗೆ ಕ್ಕೆ ಕರೆ ಮಾಡಿ ತನಗೆ ಸಪ್ಲಾಯ್ ಮಾಡಿದ್ದ ಕಾರ್ ಕವರ ತನ್ನ ಕಾರಿಗೆ ಸರಿ ಹೊಂದುತ್ತಿಲ್ಲ ಆದ್ದರಿಂದ ಅದನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಅದಕ್ಕೆ ಅವರು 5 ರು. ಟೋಕನ್ ಹಣ ಪಾವತಿಸಬೇಕಾಗುತ್ತದೆಂದು ಹೇಳಿ ಅರವಿಂದ ತಿವಾರಿ ಅವರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೇಳಿದ್ದರಿಂದ, ಅದರಂತೆ ಅವರು ತನ್ನ ಐ.ಸಿ.ಐ.ಸಿ.ಐ,ಬ್ಯಾಂಕ್ ಖಾತೆಯ ಸಂಖ್ಯೆ ನೀಡಿದ್ದಾರೆ. ನಂತರ ನ.23 ರಂದು ತನ್ನ ಐ.ಸಿ.ಐ.ಸಿ.ಐ, ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ನೋಡಿದಾಗ ಅವರ ಬ್ಯಾಂಕ್ ಖಾತೆಯಿಂದ ರು.7 ಲಕ್ಷದ 26 ರು ಹಣ ತೆಗೆದಿರುವುದು ಕಂಡುಬಂತು.
ಇದರಿಂದ ವಿಚಲಿತರಾದ ಅರವಿಂದ ತಿವಾರಿ ಅವರು ಹಣವನ್ನು ವಂಚಿಸಿದ ಅಪರಿಚಿತ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿ.ಇ.ಎನ್.ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Leave a Comment