ಹೊನ್ನಾವರ- ಭಟ್ಕಳದ ಪತ್ರಕರ್ತ ಅರ್ಜನ್ ಮಲ್ಯ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಮತ್ತು ಎಲ್ಲ 6 ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಅಖಿಲ ಭಾರತ ಜರ್ನಲಿಸ್ಟ್ ಹೊನ್ನಾವರ ತಾಲೂಕ ಘಟಕದಿಂದ ಹೊನ್ನಾವರ ತಹಸೀಲ್ದಾರ ನಾಗರಾಜ್ ನಾಯಡ್ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿಸಲ್ಲಿಸಲಾಯಿತು.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕರಾವಳಿಯ ಸಮಾಚಾರ ವೆಬ್ ಪೋರ್ಟಲ್ ಸಂಪಾದಕ, ಪತ್ರಕರ್ತ ಅರ್ಜುನ ಮಲ್ಯನ ಮೇಲೆ ಮುಸುಕುದಾರಿಗಳ ಗುಂಪು ಕಳೆದ ಗುರುವಾರ ದಿನಾಂಕ 18-11-2021ರಂದು ಸಂಜೆ 6-30 ಕ್ಕೆ ಭಟ್ಕಳದ ಬೆಳಕೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಅಖಿಲ ಭಾರತ್ ಜರನಲಿಸ್ಟ್ ಫೆಡರೇಷನ್ ಉತ್ತರ ಕನ್ನಡ ಜಿಲ್ಲಾ ಘಟಕ ಖಂಡಿಸುತ್ತದ್ದೆ.
ಪತ್ರಕರ್ತ ಅರ್ಜುನ್ ಮಲ್ಯ ಮೇಲೇ ಹಲ್ಲೆ ಮಾಡಿದಎಲ್ಲಾ 6 ಜನ ದುಷ್ಕರ್ಮಿಗಳನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರಾವಳಿ ಸಮಾಚಾರ್ ಎಂಬ ವೆಬ್ ಪೋರ್ಟಲ್ ಸಂಪಾದಕ ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ ಕಚೇರಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಬೆಳಕೆ ಬಳಿ ಆರು ಜನರ ಮುಸುಕುದಾರಿಗಳು ರಾಡ್ ಮತ್ತು ಕಟ್ಟಿಗೆ ತುಂಡುಗಳಿಂದ ದಾಳಿ ನಡೆಸಿದ್ದು ಸ್ಥಳೀಯರು ಆಗಮಿಸುತಿದ್ದಂತೆ ಹಲ್ಲೆಕೋರರು ಓಡಿಹೋಗಿದ್ದಾರೆ.
ಹಲ್ಲೆಯಿಂದ ಅರ್ಜುನ್ ಮಲ್ಯ ರವರ ಕೈ ಮುರಿದಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವರದಿಯನ್ನು ಅರ್ಜುನ ಮಲ್ಯ ಅವರು ತಮ್ಮ ಕರಾವಳಿ ಸಮಾಚಾರ ಯುಟ್ಯೂಬ್ ಚಾನೆಲ್ ನಲ್ಲಿ ಸುದ್ದಿ ಬಿತ್ತರಿಸಿದ್ದರು. ಈ ಕಾರಣಕ್ಕಾಗಿ ದುಷ್ಕರ್ಮಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ.ಆದ ಕಾರಣ ಪೋಲಿಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭಿರ ವಾಗಿ ಪರಿಗಣಿಸಿ ಎಲ್ಲ 6 ಆರೋಪಿಗಳನ್ನು ಬಂದಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈ ಗೊಳ್ಳಬೇಕು.
ಈ ಘಟನೆಯಿಂದ ಅರ್ಜುನ ಮಲ್ಯ & ಅವರ ಕುಟುಂಬ ಭಯಬೀತರಾಗಿದ್ದು ಅವರಿಗೆ ರಕ್ಷಣೆಯನ್ನು ನೀಡಬೇಕಾಗಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕುಮಾರ್ ನಾಯ್ಕ. ಭಟ್ ಹೊನ್ನಾವರದ ಪತ್ರಕರ್ತ ಸುಧೀರ್ ನಾಯ್ಕ , ಅಖಿಲ ಭಾರತ್ ಜರನಲಿಸ್ಟ್ ಹೊನ್ನಾವರ ತಾಲೂಕ ಪ್ರಧಾನ್ ಕಾರ್ಯದರ್ಶಿ ಸುಚಿತ್ರಾ ನಾಯ್ಕ್, ಜಿಲ್ಲಾ ಸಮಿತಿ ಸದಸ್ಯ ವಿವೇಕ್ ಶೇಟ್, ಅಂಬಿಗ ನ್ಯೂಸ್ ವರದಿಗಾರ ರಾಜು ಮಾಸ್ತಿ ಹಳ್ಳ, ಮುಂತಾದವರು ಉಪಸ್ಥಿತರಿದ್ದರು.
ವರದಿ- ಸುಚಿತ್ರಾ ನಾಯ್ಕ ಹೊನ್ನಾವರ
Leave a Comment