ಕಾರವಾರ : ಜಿಲ್ಲೆಯಾದ್ಯಂತ ಬಾಲ ಅಥವಾ ಕಿಶೋರ ಕಾರ್ಮಿಕರನ್ನು ಸಮೀಕ್ಷೆಯ ಮೂಲಕ ಗುರುತಿಸಲು ಅರ್ಹ ಸರಕಾರೇತರ ಸಂಘ-ಸAಸ್ಥೆಗಳಿAದ ಕಾರ್ಮಿಕ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಬಯಸುವ ಅರ್ಜಿದಾರರು ಸರಕಾರೇತರ ಸಂಸ್ಥೆಯು ಸಕ್ಷಮ ನೋಂದಣಾಧಿಕಾರಿಗಳಲ್ಲಿ ನೋಂದಣಿ ಹೊಂದಿದ್ದು, ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಪ್ರಚಲಿತ ನವೀಕರಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಹಿಂದೆ ಇಂತಹ ಯಾವುದಾದರು ಸಮೀಕ್ಷೆ ನಡೆಸಿದ ಅನುಭವ ಹೊಂದಿದ ಬಗ್ಗೆ ಅನುಭವ ಪ್ರಮಾಣಪತ್ರ ಲಗತ್ತಿಸಬೇಕು. ಜಿಲ್ಲೆಯ ಪ್ರತಿ ಅಂಗಡಿ, ವಾಣಿಜ್ಯ ಸಂಸ್ಥೆ, ಹೊಟೇಲ್, ಗ್ಯಾರೇಜ್, ಕಾರ್ಖಾನೆ, ಗ್ರಹಕ್ಕೆ ಗಾರಿಕೆಗಳು, ಬೇಕರಿ ಉತ್ಪನ್ನಗಳ ತಯಾರಿಕಾ ಘಟಕಗಳು, ಕಲ್ಲು ಕಾಂಗಳು ಗಣಿ ಮುಂತಾದ ಎಲ್ಲಾ ಸಂಸ್ಥೆಗಳಲ್ಲಿ, ಬಂದರು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ದತ್ತಾಂಶವನ್ನು ನಿಗದಿತ ನಮೂನೆ-1 ಮತ್ತು-2 ರಲ್ಲಿ ಸಂಗ್ರಹಿಸಿ, ಸಮೀಕ್ಷೆ ಮಾಡಿದ ಸಾಪ್ಟ್, ಹಾರ್ಡ್ಕಾಪಿಗಳ ಪ್ರತಿಯನ್ನು ಒದಗಿಸಬೇಕು.
ಅಪಾಯಾಕರಿ, ಅಪಾಯಕಾರಿಯಲ್ಲದ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಬೆಳಿಗ್ಗೆ 10 ರಿಂದ ಸಂಜೆ 6 ರತನಕ ಮಾಡಬೇಕು. ಸಮೀಕ್ಷಾ ಕಾರ್ಯ ಡಾಟಾ ಎಂಟ್ರಿಯ ಕೆಲಸವು ಸಂಪೂರ್ಣ ಸರಕಾರೇತರ ಸಂಸ್ಥೆಯದ್ದಾಗಿರುತ್ತದೆ.
ಆಯ್ಕೆಯಾಗುವ ಸರಕಾ�ರೇತರ ಸಂಸ್ಥೆಯ ಗಣತಿದಾರರಿಗೆ ಈ ಕಾರ್ಯಾಲಯದಿಂದ 1 ದಿನದ ತರಬೇತಿ ನೀಡಲಾಗುವದು. ಸಮೀಕ್ಷಾ ಕಾರ್ಯ ಕೈಗೊಳ್ಳಲು ಆದೇಶ ನೀಡಿದ 15 ದಿನಗಳಲ್ಲಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ಬದ್ಧರಿರಬೇಕು.ಅರ್ಜಿಯನ್ನು ಡಿಸೆಂಬರ್ 15 ರೊಳಗಾಗಿ ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಕಾರವಾರ, ಹೆಸರು ಬರೆದು, ಕಾರ್ಮಿಕ ಅಧಿಕಾರಿಗಳ ಕಚೇರಿ ಮೀರಾ ಮನೋಹರ ಕಾಂಪ್ಲೆಕ್ಸ್ ಹಬ್ಬುವಾಡ ರೋಡ್ ಜಿ.ಕೆ. ರಾಮ ಬಿಲ್ಡಿಂಗ್ ಎದುರು, ಬಸ್ 15 ಹತ್ತಿರ ಕಾರವಾರ-581301 ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-08382-226637 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.
Leave a Comment