ದಾಂಡೇಲಿ: ನಗರದ ಸಾರಿಗೆ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಕೆಪಿಸಿ ಕಾಲೋನಿಯಲ್ಲಿ ಇರುವ ಮನೆಯೊಂದರ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ರವಿವಾರ ನಡೆದಿದೆ.
ಕೆಪಿಸಿ ಕಾಲೋನಿಯ ನಿವಾಸಿ ಡಾ.ಪಿ.ವಿ.ಶಾನಭಾಗ್ ಅವರು ಕುಟುಂಬ ಸಮೇತ ಧಾರವಾಡಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ರವಿವಾರ ಮಧ್ನಾಹ ವೇಳೆ ಬೀಗ ಒಡೆದು ಮನೆಯೊಳಗೆ ಕಳ್ಳರು ನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನ ಬಾಗಿಲು ತೆರದು ಕಪಾಟಿನಲ್ಲಿ ಜೋಡಿಸಿಟ್ಟಿದ್ದ ಬಟ್ಟೆಗಳನ್ನು ಚೆಲ್ಲಪಿಲ್ಲಿಯಾಗಿ ಬಿಸಾಕಿದ್ದಾರೆ.
ಇನ್ನೂ ದೇವರ ಮಂಪದಬಳಿಯಿದ್ದ ಚಿಲ್ಲರೆ ಡಬ್ಬವನ್ನು ಹೊರ ತಂದು ಗೇಟ್ ಹತ್ತಿರ ಇಟ್ಟಿದ್ದಾರೆ. ಏನೆಲ್ಲಾ ಕಳವಾಗಿರಬಹುದೆಂಬುವುದನ್ನು ಮನೆಯ ಮಾಲೀಕರಾದ ಡಾ.ಪಿ.ವಿ.ಶಾನಭಾಗ್ ಅವರು ಬಂದ ನಂತರವೆ ಸ್ಪಷ್ಟವಾಗಿ ತಿಳಿಯಬಹುದಾಗಿದೆ.
ವಿಷಯ ತಿಳಿದು ನಗರ ಠಾಣೆಯ ತನಿಖಾ ವಿಭಾಗದ ಪಿಎಸೈ ಕಿರಣ್ ಪಾಟೀಲ ಅವರ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment