ಹೊನ್ನಾವರ : ತಾಲೂಕಿನ ಸಂಕೊಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೇ ಸಂಗ್ರಹಿಸಿಟ್ಟ ಮರಳನ್ನು ಜಪುö್ತಮಾಡಿ ಸಂಬAಧಪಟ್ಟವರಿಗೆ ರಾಜಧನ ಪಾವತಿಸುವಂತೆ ಸೂಚಿಸಿದ ಘಟನೆ ನಡೆದಿದೆ.
ನೆರೆ ಹಾವಳಿಯಿಂದ ಹಾಳಾದ ಗೋಳಿ ಬೀರಪ್ಪ ದೇವಸ್ಥಾನ 560 ಮೀಟರ್ ರಸ್ತೆಕಾಮಗಾರಿಯನ್ನು ನೆರೆ ನಿಧಿಯಡಿ ಕುಮಟಾದ ಗುತ್ತಿಗೆದಾರರೊಬ್ಬರು ಮಾಡುತ್ತಿದ್ದರು. ಸುಮಾರು 3 ವಾರಗಳ ಹಿಂದೆ ಮರಳು ಹಾಗೂ ಜಲ್ಲಿ ಕಲ್ಲನ್ನು ರಸ್ತೆಯ ಪಕ್ಕದಲ್ಲಿ ಗೋಳಿ ಬೀರಪ್ಪ ದೇವಸ್ಥಾನ ಹತ್ತಿರ ಸಂಗ್ರಹಿಸಿಟ್ಟುಕೊAಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್, ಕಂದಾಯ ಹಾಗೂ ಗಣಿ & ಭೂವಿಜ್ಞಾನ ಇಲಾಖೆಯ ಅಧಿಕಾರಿ, ಸಿಬ್ಬಂದಿಯವರು ಜಂಟಿಯಾಗಿ ಪರಿಶೀಲಿಸಿದ್ದಾರೆ.
ಮರಳಿಗೆ ಪರವಾನಿಗೆ ಇಲ್ಲದೇ ಇರುವುದರಿಂದ ಈ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಜಪ್ತು ಪಡಿಸಿಕೊಂಡು, ನಿಯಮಾವಳಿಯಂತೆ ಪ್ರತಿ ಮೆಟ್ರಿಕ್ ಟನ್ ಮರಳಿಗೆ ರೂ.650 ಗಳಂತೆ ಒಟ್ಟೂ ರೂ.65,000 ರಾಜಧನ ಪಾವತಿಸುವಂತೆ ಸೂಚಿಸಿ ಮರಳನ್ನು ಪುನ: ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ಹಸ್ತಾಂತರಿಸಿದ್ದಾರೆ.
Leave a Comment