ಹಳಿಯಾಳ : ನವೆಂಬರ್ 27 ಮತ್ತು 28ರಂದು ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳದ ಮಂಜು ಕರಾಟೆ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಟಾ ವಿಭಾಗದಲ್ಲಿ ಪೃಥ್ವಿ ಬಾಲಣ್ಣನವರ, ಭೂಮಿಕಾ ಗರಗ, ತನ್ವಿ ಧಾರವಾಡಕರ, ಸಿದ್ದೇಶ್ವರ ಮಡಿವಾಳ , ಅಭಿಷೇಕ್ ಅತನೂರ, ಸಾಯಿಕುಮಾರ ತಾಂಬಿಟ್ಕರ, ಸುಜಯ ವಾಟಲೇಕರ, ಸಂತೋಷ ತಳವಾರ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೇಘರಾಜ ಬೊಬಾಟಿ, ಶ್ಲೋಕ ನೇತ್ರೆ ಕರ, ಅರಹನ ಮುನವಳ್ಳಿ, ಕೀರ್ತನ ಅಸಂಗಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಗತಿ ಹುಳಬುತ್ತಿ, ಅಖಿಲ ಪಚರು, ಶ್ರೀಧರ ಹಡಪದ, ಸುಮಿತ ನಿಂಗನಗೌಡ, ಇರ್ಫಾನ ಹದಲಿ , ಶಮಿನಾ ಹದಲಿ, ಅಲ್ಫಾಜ್ ಮುನವಳ್ಳಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಅದೇ ರೀತಿ ಕುಮಿಟೆ ವಿಭಾಗದಲ್ಲಿ ಪೃಥ್ವಿ ಬಾಲಣ್ಣನವರ, ತನ್ವಿ ಧಾರವಾಡಕರ, ಅರಹಾನ ಮುನವಳ್ಳಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸುಮಿತ ನಿಂಗನಗೌಡ, ಶಮೀನಾ ಹದಲಿ, ಕೀರ್ತನ ಅಸಂಗಿ, ಪ್ರಗತಿ ಹುಳಬುತ್ತೆ, ಭೂಮಿಕಾ ಗರಗ , ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಭಿಷೇಕ ಅತನೂರು, ಸಾಯಿಕುಮಾರ ತಾಂಬಿಟಕರ, ಸುಜಯ ವಾಟಲೇಕರ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಿಹಾನ ಮಂಜುನಾಥ ಮಾದಾರ ರವರು ತರಬೇತಿಯನ್ನು ನೀಡಿದ್ದಾರೆ. ಹಳಿಯಾಳ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.






Leave a Comment