ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯಿದೆ ಅಡಿಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
ಇಡಗುಂಜಿ ವಿನಾಯಕ ವನದ ಪಕ್ಷದ ಕಚ್ಚಾ ರಸ್ತೆಯಲ್ಲಿ ಗುಣವಂತೆಯ ಜಗದೀಶ ಗೌಡ ತನ್ನ ದ್ವಿಚಕ್ರ ವಾಹನದಲ್ಲಿ ಪಾಸ್ ಪರ್ಮಿಟ್ ಇಲ್ಲದೇ ಭಟ್ಕಳದ ರಿಜ್ವಾನ್ ಎಂಬುವವರಿAದ ಖರೀದಿಸಿದ ಸುಮಾರು 6000 ರೂಪಾಯಿ ಮೌಲ್ಯದ 60 ಗ್ರಾಮ ಗಾಂಜಾ ವನ್ನು ಸ್ಕೂಟಿಯ ಬಾಕ್ಸ್ನಲ್ಲಿಟ್ಟು ಮಾರಾಟ ಮಾಡುತ್ತಿದ್ದಾಗ ಮಂಕಿ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಾಲೂಕಿನ ಗಾಂಜಾ ವಿದ್ಯಾರ್ಥಿಗಳ ಕೈ ಸೇರುತ್ತಿದೆ ಎನ್ನುವ ಅಪವಾದ ಕೇಳುತ್ತಿದ್ದರೂ ಆಗೊಮ್ಮೆ ಈಗಮ್ಮೊ ಸಿಕ್ಕಿ ಬೀಳುತ್ತಿದ್ದರು. ಕೆಲ ತಿಂಗಳ ಹಿಂದೆ ಈತನು ಗಾಂಜಾ ಮಾರಾಟ ತೊಡಗಿದ್ದಾಗ ಸಿಕ್ಕಿಬಿದ್ದರೂ ತನ್ನ ಹಳೇ ಜಾಳಿಯನ್ನು ಮುಂದುವರೆಸಿದ್ದನು. ಈತನ ಜೊತೆ ಈ ಪ್ರಕರಣ ಇರುವರೆಲ್ಲರನ್ನು ಪೊಲೀಸರು ಪತ್ತೆ ಮಾಡಬೇಕಿದೆ. ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
Leave a Comment