ಬೆಂಗಳೂರು : ಬಸ್ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಡಿ. 10 ರಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಂಸ್ಥೆ ಘೋಷಿಸಿದೆ.
ಸಂಸ್ಥೆ ನಷ್ಟದ ಹಾದಿಯಲ್ಲಿರುವುದರಿಂದ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದ್ದು, ಶೇ. 10 ರಷ್ಟು ದರ ಏರಿಕೆ ಮಾಡಲಾಗಿದೆ. ಒಂದರಿAದ 10 ನೇ ಸ್ಟೇಜ್ ವರೆಗಿನ ಲಗೇಜ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
11 ರಿಂದ 15ನೇ ಹಂತಕ್ಕೆ ಈ ಹಿಂದೆ ಇದ್ದ 14 ರೂ. ದರವನ್ನು 17 ರೂ. ಗಳಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ 16 ರಿಂದ 21ನೇ ಹಂತದ ದರವನ್ನು 18 ರಿಂದ 21, 21 ರಿಂದ 25ನೇ ಹಂತಕ್ಕೆ 21 ರಿಂದ 24 ರೂ.ಗಳಿಗೆ, 26 ರಿಂದ 30ನೇ ಹಂತಕ್ಕೆ 25 ರಿಂದ 28, 31 ರಿಂದ 35 ನೇ ಹಂತಕ್ಕೆ 29 ರಿಂದ 32, 36 ರಿಂದ 40ನೇ ಹಂತಕ್ಕೆ 33 ರಿಂದ 36, 41 ರಿಂದ 45ನೇ ಹಂತಕ್ಕೆ 36 ರಿಂದ 39, 46 ರಿಂದ 50ನೇ ಹಂತಕ್ಕೆ 40 ರಿಂದ 43. 51 ರಿಂದ 55ನೇ ಹಂತಕ್ಕೆ 44 ರಿಂದ 47, 56 ರಿಂದ 60ನೇ ಹಂತಕ್ಕೆ 48 ರಿಂದ 51, 61 ರಿಂದ 65ನೇ ಹಂತಕ್ಕೆ 51 ರಿಂದ 54 ಕ್ಕೆ ಹಾಗೂ 66 ರಿಂದ 70ನೇ ಹಂತಕ್ಕೆ 55 ರೂಗಳಿಂದ ರೂ.ಗಳಿಗೆ ದರ ಏರಿಕೆ ಮಾಡಲಾಗಿದೆ.
Leave a Comment