ಭಟ್ಕಳ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡು ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಬೆಳಕೆ ಸಮೀಪ ನಡೆದಿದೆ.
ತಾಲೂಕಿನ ಗಡಿ ಭಾಗದಲ್ಲಿರುವ ಶಿರೂರು ಟೋಲಗೆ ಸೇರಿದ 1033 ವಾಹನದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡು ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ದ್ರಶ್ಯ ವಿಡಿಯೋ
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕೃತ್ಯಕ್ಕೆ ತಾಲ್ಲೂಕಿನಾದ್ಯಂತ ಆಕ್ರೋಶ ವ್ಯಕವಾಗುತ್ತಿದೆ.

Leave a Comment