ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿ14 ಸಾವಿರ ಹಾಗೂ ಜಿಲ್ಲೆಯಾದ್ಯಂತ 27000 ವಿದ್ಯಾರ್ಥಿಗಳಿಂದ ಆಗ್ರಹಗಳನ್ನು ಹೊತ್ತು ದೆಹಲಿಯತ್ತ ಮುಖ ಮಾಡಿದ ಪೊಸ್ಟ್ ಕಾರ್ಡಗಳು .
ಅಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ಲಕ್ಷ ಪೊಸ್ಟ್ ಕಾರ್ಡ ಅಭಿಯಾನ ವನ್ನು ಅಂಚೆ ಇಲಾಖೆ , ಲಿಟ್ರಸಿ ಡಿಪಾರ್ಟ್ಮೆಂಟ್ ಹಾಗೂ ಶಿಕ್ಷಣ ಇಲಾಖೆ ಯೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದೆ. ಅದರ ಪ್ರಯುಕ್ತ ಅಂಚೆ ಇಲಾಖೆ ಕಾರವಾರ ವಿಭಾಗದ 4 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ಪೊಸ್ಟ್ ಕಾರ್ಡನಲ್ಲಿ ತಮ್ಮ ವಿಚಾರವನ್ನು ಬರೆದು ಪ್ರಧಾನಮಂತ್ರಿಯವರಿಗೆ ತಿಳಿಸಲಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಎಲೆಮರೆಯ ಯೋಧರು (ನಾಯಕರು) ಅಥವಾ ನನ್ನ ದೃಷ್ಟಿಯಲ್ಲಿ 2047 ನನ್ನ ಕನಸಿನ ಭಾರತ ಇವುಗಳಲ್ಲಿ ಯಾವುದಾದರೊಂದು ವಿಷಯದ ಕುರಿತು ಅಭಿಪ್ರಾಯವನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಡಿಸೆಂಬರ್ 1ರಿಂದ ಈ ಅಭಿಯಾನ ಆರಂಭಗೊಂಡಿದ್ದು, ಡಿಸೆಂಬರ್20 ರವರೆಗೆ ನಡೆಯುತ್ತಿದೆ.ಈ ಅಭಿಯಾನಕ್ಕೆ ಕುಮಟಾದಲ್ಲಿ ಉತ್ತಮ ಸ್ಪಂದನೆ ವ್ಯಕ್ತ ವಾಗಿದ್ದು 14 ಸಾವಿರ ವಿದ್ಯಾರ್ಥಿಗಳು ಪೊಸ್ಟ್ ಕಾರ್ಡ್ ಬರೆಯುತ್ತಿದ್ದಾರೆ.
ಕುಮಟಾ ತಾಲೂಕಿನ ವಿದ್ಯಾರ್ಥಿಗಳು ಪೊಸ್ಟ್ ಕಾರ್ಡಿನಲ್ಲಿ 2047 ರ ಹೊತ್ತಿಗೆ ಭಾರತ ಪ್ರಗತಿ ಹೊಂದಿದ ರಾಷ್ಟೃವಾಗಿ,ಉತ್ತಮ ಆರೋಗ್ಯ, ಜನಸಂಖ್ಯೆ ಸಮಸ್ಯೆ, ಪ್ರತಿಭೆ ಹಾಗೂ ಯೋಗ್ಯತೆಯೇ ಮೀಸಲಾತಿಯೇ ಮಾನದಂಡ, ಜಾತೀಯತೆ,ಲಿಂಗ ತಾರತಮ್ಯ,ಆರ್ಥಿಕ ಸಮಾನತೆ,ಎಲ್ಲರೂ ಸಮಾನರು, ಮುತಾಂದ ವಿಷಯದ ಕುರಿತು ತಮ್ಮ ಮನದಾಳದ ಇಂಗಿತವನ್ನು ಬರೆದುಕೊಂಡಿದ್ದಾರೆ.
ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಬರೆಯಬಹುದಾಗಿದ್ದು, ಪ್ರತಿ ಶಾಲೆಯ ಆಯ್ದ ಹತ್ತು ಕಾರ್ಡಗಳನ್ನು ಪ್ರಧಾನಿಗಳ ವೆಬ್‌ಸೈಟ್ (my gov) ನಲ್ಲಿ ಅಪ್ ಲೋಡ್ ಮಾಡಲಾಗುವುದು.ಹಾಗೂ ಎಲ್ಲ ಕಾರ್ಡಗಳನ್ನು ದೆಹಲಿಯ ಪ್ರಧಾನಮಂತ್ರಿಗಳ ಕಛೇರಿಗೆ ಕುಮಟಾ ಮುಖ್ಯ ಅಂಚೆಕಛೇರಿಯಿಂದ ವಿಶೇಷ ಬ್ಯಾಗ ಮೂಲಕ ನಿರ್ಮಾಣ ಭವನ ನವದೆಹಲಿ 110011 ಗೆ ಕಳಿಸಲಾಗುವುದು.
ಕುಮಟಾ ತಾಲೂಕಿನ ಗುಡಿಗಾರಗಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ವಿಶೇಷ ಆಕರ್ಷಣೀಯವಾಗಿ ಕುಳ್ಳಿರಿಸಿ ಪೊಸ್ಟ್ ಕಾರ್ಡಬರೆಯಿಸುವಲ್ಲಿ ಶ್ರೀ ಮಂಜು ಮಾಸ್ಟರವರ ಪ್ರಯತ್ನ ಜಿಲ್ಲೆಗೊಂದು ಮಾದರಿಯಾಯಿತ್ತು.
ಅಜಾದಿ ಕಿ ಅಮೃತ ಮಹೋತ್ಸವ ದ ಅಂಗವಾಗಿ ಪೊಸ್ಟ್ ಕಾರ್ಡ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು , ವಿದ್ಯಾರ್ಥಿಗಳ ಉತ್ತಮ ಆಲೋಚನೆಗಳು ಅಂಚೆ ಇಲಾಖೆ ಮೂಲಕ ಪ್ರಧಾನಿಗಳ ಸಚಿವಾಲಯಕ್ಕೆ ತಲುಪುತ್ತವೆ ಎಂದು ಕಾರವಾರ ವಿಭಾಗ ಅಂಚೆ ಇಲಾಖೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿ ಎಚ್ ನಾಯ್ಕ ವಿವರಿಸಿದ್ದರು.
ಈ ಅಭಿಯಾನದಲ್ಲಿ ಕುಮಟಾ ತಾಲೂಕಾ ಶಿಕ್ಷಣ ಇಲಾಖಾ ಬಿಇಒ ಹಾಗೂ ಬಿಆರ್ ಸಿ ಎಲ್ಲಾ ಶಿಕ್ಷಕರ ಹಾಗೂ ಅಂಚೆ ಇಲಾಖಾ ಅಧೀಕ್ಷಕರು ಸಿಬ್ಬಂದಿಗಳ ಸಂಪೂರ್ಣ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ.
ಶಿಕ್ಷಣ ಇಲಾಖೆ, ಕೇಂದ್ರ ಸಚಿವಾಲಯದ ಆದೇಶ ರೂ 50 ಪೈಸೆ ನೀಡಿ ಕಾರ್ಡ ಖರೀದಿಸುವ ಆದೇಶದಂತೆ ಕುಮಟಾದಲ್ಲಿ ಒಬ್ಬ ಶಿಕ್ಷಣ ಪ್ರೇಮಿಗಳು ಕುಮಟಾ ತಾಲೂಕಿನ ಎಲ್ಲ ಕಾರ್ಡಗಳ ಹಣ ನೀಡಿ ವಿದ್ಯಾರ್ಥಿಗಳಿಗೆ ಪ್ರೀಯಾಗಿ ನೀಡಿ ಪೋಸ್ಟ್ ಕಾರ್ಡ ಅಭಿಯಾನಕ್ಕೆ ಪ್ರೋತ್ಸಾಹಿಸಿದ್ದಾರೆ.
Leave a Comment