ಹೊನ್ನಾವರ : ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಬೆಂಗಳೂರಿನ ಕೆಪಿಸಿಸಿ ಕಾರ್ಯಾಲಯದಲ್ಲಿ ಚಾಲನೆ ನೀಡಿದರು.
ಈ ಕಾರ್ಯಕ್ರಮ ಝೂಮ್ ಆಪ್ ಮೂಲಕ ಪಾಲ್ಗೊಳ್ಳಲು ರಾಜ್ಯದ ಎಲ್ಲಾ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ತಿಳಿಸಲಾಗಿತ್ತು. ಅದರಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಝೂಮ್ ಸಭೆಯಲ್ಲಿ ಪಾಲ್ಗೊಂಡು, ನಂತರ ಪ್ರತಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕನಿಷ್ಠ ನಾಲ್ಕು ಮತಗಟ್ಟೆಗಳಲ್ಲಿ ಚಾಲನೆ ನೀಡಬೇಕೆನ್ನುವ ಮಾರ್ಗದರ್ಶನದಂತೆ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 199-ಪಾಳ್ಯಾರಸ್ತೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಬೆಂಗಳೂರಿನ “ಕಾಂಗ್ರೆಸ್ ಭವನ” ದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ 199 ಮತಗಟ್ಟೆಯಲ್ಲಿ ವಾಸವಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಉ.ಕ. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್. ಯು. ತಲಕಣಿ ಮನೆಗೆ ಬಿಸಿಸಿ ಕಾರ್ಯದರ್ಶಿ ಬ್ರೆಜಿಲ್ ಪಿಂಟೊ ಅವರ ಜೊತೆ ತೆರಳಿ ಸದಸ್ಯತ್ವ ನೊಂದಣಿ ಮಾಡಿ, ಇನ್ನೂ ಹಲವರ ಸದಸ್ಯತ್ವ ನೊಂದಣಿ ಮಾಡುವ ಮೂಲಕ ಹೊನ್ನಾವರದಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಾರ್ಚ್ 31 ರ ವರೆಗೂ ನೊಂದಣಿಗೆ ಅವಕಾಶ ನೀಡಲಾಗಿದ್ದೂ, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಾಯಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಮನವಿ ಮಾಡಿದ್ದಾರೆ.
Leave a Comment