ಹೊನ್ನಾವರ : ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಕನ್ನರ್ಡಧ್ವಜ ಸುಟ್ಟಿರುವುದನ್ನು ಖಂಡಿಸಿ ಪಟ್ಟಣದ ಶರಾವತಿ ವೃತ್ತದಲ್ಲಿ ಕರುನಾಡ ವಿಜಯಸೇನೆಯ ಕಾರ್ಯಕರ್ತರು ಮಹಾರಾಷ್ಟç ಮುಖ್ಯಮಂತ್ರಿಯ ಪ್ರತಿಕೃತಿ ಸುಟ್ಟು ಆಕ್ರೋಶ ಹೊರಹಾಕಿದರು.

ಬೆಳಗಾವಿ ವಿಧಾನಮಂಡಲ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟçಕ್ಕೆ ಸೇರಬೇಕೆಂದು ಮೊಂಡುವಾದ ಮಾಡುವ ಶಿವಸೇನೆಯ ಕಾರ್ಯಕರ್ತರು. ಮಂಗಳವಾರ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಡುವ ಹೀನ ಕೃತ್ಯಕ್ಕೆ ಮುಂದಾಗಿದ್ದರು. ಇದನ್ನು ಕರುನಾಡ ವಿಜಯಸೇನೆ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದ ಮಹಾರಾಷ್ಟç ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ವಿನಾಯಕ ಆಜಾರಿ ಮಾತನಾಡಿ, ನೆರೆ ರಾಜ್ಯದಲ್ಲಿ ಶಿವಸೇನೆಯವರು ವಿಕೃತಿ ಮೆರೆಯುತ್ತಿದ್ದು. ಮುಂದಿನ ದಿನದಲ್ಲಿ ಇಂತಹ ಘಟನೆಗಳನ್ನು ಮರುಕಳಿಸಿದರೆ ನಿಮ್ಮ ರಾಜ್ಯಕ್ಕೆ ಒಂದು ತಕ್ಕ ಉತ್ತರ ನೀಡಬೇಕಾಗುತ್ತದೆ. ರಾಜ್ಯಧ್ವಜಕ್ಕೆ ಅಪಮಾನ ಮಾಡಿರುವುದಕ್ಕೆ ಅಲ್ಲಿಯ ಮುಖ್ಯಮಂತ್ರಿ ಕ್ರಮಕೈಗೊಳ್ಳದೇ ಇರುವುದಕ್ಕೆ ಅಸಮಾಧಾನ ವ್ಕಕ್ತಪಡಿಸಿದರು.
ಸಂಘಡನೆಯ ವಕ್ತಾರ ಶ್ರೀರಾಮ ಹೊನ್ನಾವರ ಮಾತನಾಡಿ. ಶಿವಸೇನಾ ಕಾರ್ಯಕರ್ತರು ನಾಡಧ್ವಜ ಸುಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಮಾಡದ್ದಾರೆ. ನಮ್ಮ ಗಡಿಜಿಲ್ಲೆ ಬೆಳಗಾವಿ ನಮ್ಮ ರಾಜ್ಯದ ಆಸ್ತಿಯಾಗಿದೆ. ಮತ್ತೆ ಗಡಿತಂಟೆಗೆ ಬಂದರ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕು ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಸಂಜಾಲಕ ಮಹೇಶ ಮೇಸ್ತ, ಯುವ ಘಟಕದ ಉಪಾಧ್ಯಕ್ಷ ನಿತಿನ್ ಆಜಾರಿ, ಸಂದೇಶ ನಾಯ್ಕ, ಅಲ್ತಾಫ್ ಶೇಖ್, ಸಂಜಯಕುಮಾರ್, ರಾಹುಲ್ ಮೇಸ್ತ, ಗಂಜೇAದ್ರ ನಾಯ್ಕ ಮತ್ತಿತರರು ಹಾಜರಿದ್ದರು.
Leave a Comment