ಕಾರವಾರ : ಬೆಂಗಳೂರಿನ ಹಿಂದುಸ್ಥಾನ ಏರೊನಾಟಿಕ್ಸ್ ಲಿಮಿಟೆಡ್ನ ಟ್ರೇನಿಂಗ್ ಸಂಸ್ಥೆಯು ಫಿಟ್ಟರ್, ಟರ್ನರ್, ಮಶಿನಿಸ್ಟ್, ಇಲೆಕ್ಟಿçಶಿಯನ್, ವೆಲ್ಡರ್, ಫೌಂಡರಿಮೆನ್, ಕೋಪಾ ಹಾಗೂ ಶೀಟ್ಮೆಟಲ್ ವರ್ಕರ್ ಐಟಿಐ ಟ್ರೇಡ್ಗಳಲ್ಲಿ ತೇರ್ಗಡರಯಾದ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅಪ್ರೆಂಟಿಸ್ರ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮೂಲಕ ಅರ್ಜಿ ಅರ್ಜಿ ಅಲ್ಲಿಸಬಹುದಾಗಿದ್ದು, ಆನ್ಲೈನ್ ವೆಬ್ ಸೈಟ್ https://www.apprenticeshipindia.gov.in/ ನಲ್ಲಿ ಮೊದಲು ನೋಂದಣಿ ಮಾಡಿ. ಅಪ್ರೆಂಡಿಸ್ ನೋಂದಣಿ ಸಂಖ್ಯೆಯೊAದಿಗೆ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಬೇಟಿ ನೀಡಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಭರ್ತಿ ಮಾಡಿ, ಸ್ವ-ಧೃಢೀಕೃತ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಮತ್ತು ರಾಷ್ಟಿçÃಯ ವೃತ್ತಿ ತರಬೇತಿ ಕೌನ್ಸಿಲ್ನಿಂದ ಅಂಗೀಕೃತವಾದ ಸಂಸ್ಥೆಯಿAದ ಪಡೆದ ಐಟಿಐ ಎನ್ಸಿವಿಟಿ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳು, ಜಾತಿ ಪ್ರಮಾಣಪತ್ರ, ಪಿ.ಎಚ್., ಅರ್ಮ್ಡ್ ಪಸರ್ನಲ್, ಆಧಾರ್ ಕಾರ್ಡ್ ಪ್ರತಿ, ಪಾನ್ ಕಾರ್ಡ್ ಪ್ರತಿ, ಆನ್ಲೈನ್ ಅಪ್ರೆಂಟಿಸ್ ನೋಂದಣಿ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್ ಪೋರ್ಟ್ ಸೈಜ್ ಫೋಟೊಗಳೊಂದಿಗೆ ಡಿ. 24ರ ಒಳಗಾಗಿ ಸಲ್ಲಿಸಬಹುದಾಗಿದೆ.
ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08382 -226 386ಗೆ ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment