ಕಾರವಾರ : ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವಾರು ಸೇವೆಗಳನ್ನು ಇನ್ನು ಮುಂದೆ ತಾಲ್ಲೂಕು ಕಚೇರಿಗಳಿಂದ ಬೇರ್ಪಡಿಸಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವಿವಾರ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ನ ಬಿಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಜನರು ಕೆಲವು ಸೇವೆಗಳಿಗಾಗಿ ತಾಲ್ಲೂಕು ಗಣರಾಜ್ಯೋತ್ಸವ ದಿನದಿಂದ ಗ್ರಾಮಪಂ ಜಾಯ್ತಿಗಳಿವೆ ಅಕಾರ ನೀಡಲಾಗುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಇಂಟರ್ ನೆಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃಧ್ದಿಪಡಿಸಲಾಗುತ್ತಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾದ ಬಳಿಕ 4 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇನೆ. ಅದನ್ನು ಮುಂದಿನ ಮಾರ್ಚ್ ಒಳಗಾಗಿ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಬೀಗದ ಕೈ ನೀಡಬೇಕೆಂದು ಸೂಚಿಸಿದ್ದೇನೆ.
ಈ ಹಿಂದೆ ಯಾರೋ ಮನೆ ಮಂಜೂರು ಮಾಡುವುದು ಮತ್ತೆ. ಇನ್ಯೂರದೋ ಸರ್ಕಾರ ಹಣ ನೀಡುವುದು ಎಂಬ ವ್ಯವಸ್ಥೆ ಇತ್ತು. ನಮ್ಮ ಕಾಲದಲ್ಲಿ ಹಾಗೆ ಆಗುವುದಿಲ್ಲ ಎಂದರು.
ದೊಡ್ಡ ಪ ಂ ಚಾಯ್ತಿಗೆ 50 ಕ್ಕಿಂತ ಹೆಚ್ಚು ಮನೆ ಮಾಧ್ಯಮ ಪಂಚಾಯ್ತಿಗಳಿಗೆ 50 ರಿಂದ 30, ಸಣ್ಣ ಪಂಚಾಯ್ತಿಗಳಿಗೆ ಸುಮಾರು 30 ಮನೆಗಳನ್ನು ಮಂಜೂರು ಮಾಡಲಾಗುವುದು ಎಂದರು, ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ 750 ಗ್ರಾಮಪಂಚಾಯ್ತಿಗಳನ್ನು ಅಮೃತ್ ಯೋಜನೆಯಡಿ ಸಮಗ್ರವಾಗಿ ಅಭಿವೃದ್ದಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
2022ರ ಮಾರ್ಚ್ ವೇಳೆ ಈ ಪಂಜಾಯ್ತಿಗಳಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ ವಸತಿ ಯೋಜನೆ ಜಾರಿ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗಬೇಕು. ಗುರಿ ಸಾಧನೆ ಮಾಡಿದ ಪಂಚಾಯ್ತಿಗಳಿಗೆ ಸರ್ಕಾರದಿಂದ 25 ಲಕ್ಷ ರೂ.ಗಳ ಪ್ರೋತ್ಸಹ ಧನ ನೀಡಲಾಗುವುದು.
ಮುಂದಿನ ಹಂತದಲ್ಲಿ ಮತ್ತೆ 750 ಪಂಚಾಯ್ತಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಹೀಗೆ ಹಂತ ಹಂತವಾಗಿ ಮೂರ್ನಾಲ್ಕು ವರ್ಷಗಳಲ್ಲಿ ಎಲ್ಲಾ ಪಂಚಾಯ್ತಿಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವದಾಗಿ ಭರವಸೆ ನೀಡಿದರು. ಅಲ್ಲದೆ 75 ಸಾವಿರ ಗ್ರಾಮೀಣ ಭಾಗದ ಯುವಕರಿಗೆ ಕೌಶಲ್ಯ ತರಬೇತಿ, 7500 ಸ್ತಿçà ಶಕ್ತಿ ಸಂಘಗಳಿಗೆ ಪ್ರೋತ್ಸಹ ಧನ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
Leave a Comment