
ಯಲ್ಲಾಪುರ : ಕನ್ನಡಧ್ವಜ ಸುಟ್ಟ ಪ್ರಕರಣ ಹಾಗೂ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಶಿಕ್ಷೆ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲೂಕಾ, ಗ್ರಾಮೀಣ ಘಟಕದ ವತಿಯಿಂದ ಮಂಗಳವಾರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು . ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿದ್ದು ಕಿಡಿಗೇಡಿಗಳ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೇ ಬೆಳಗಾವಿ ಜಿಲ್ಲೆಯ ಪಿರಾಡಿ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಅವಮಾನ ಮಾಡಿರುವುದು, ಅವರ ಕುಲ್ಲಕ ಮನೋಭಾವನೆಯನ್ನು ಸೂಚಿಸುತ್ತದೆ. ಆದರೆ ಅದನ್ನು ಸಹಿಸಿಕೊಂಡು ಹೋಗುವಷ್ಟು ಸಹನೆ ನಮಗಿಲ್ಲ, ಆದ್ದರಿಂದ ಕೂಡಲೇ ಈ ನಾಡದ್ರೋಹಿ ಕುಕೃತ್ಯವನ್ನು ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಅಲ್ಲದೆ ಎಂ.ಇ.ಎಸ್ ಸಂಘಟನೆಯನ್ನು ಕೂಡಲೇ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಎಂದುಮನವಿಯಲ್ಲಿ ಒತ್ತಾಯಿಸಲಾಗಿದೆ . ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷವಿಲ್ಸನ್ ಆರ್. ಫರ್ನಾಂಡಿಸ್, ನಗರ ಘಟಕದ ಅಧ್ಯಕ್ಷ ಕೆ.ಎಫ್.ಕಂಬೆಳೆನ್ನವರ, ತಾಲೂಕಾ ಸಲಹೆಗಾರ ದತ್ತಾತ್ರೇಯ ಹೇಂದ್ರೆ, ತಾಲೂಕಾ ಮಹಿಳಾ ಅಧ್ಯಕ್ಷೆ ಸುಮಂಗಲಾ ಹನುಮರೆಡ್ಡಿ, ಉಪಾದ್ಯಕ್ಷೆ ಗೀತಾ ಕವಳಿ, ಕಿರವತ್ತಿ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನಾಯ್ಕ, ಮಹೇಶ ನಾಯ್ಕ, ಮೆಹಬೂಬ ಅಲಿ ಬಮ್ಮಿಗಟ್ಟಿ, ರಾಜಾರಾಮ ಯಾದವ, ಅಲೆಕ್ಸ್ ಸಿದ್ದಿ, ವಿಜಯ ಸಿದ್ದಿ, ರೇಣುಕಾ ರಂಜಿತ ಜಾದವ, ಮಂಜು ರಾಯ್ಕರ, ಪರಶುರಾಮ ಹರಿಜನ, ಸೋಮ ಭೋವಿವಡ್ಡರ, ಈರಯ್ಯ ಕಲ್ಮಠ, ಸಾಧಿಕ್ ಖಾಜಿ, ಹನೀಫ್ ಶೇಖ, ರಜಾಕ್ ಶೇಖ, ಸಲೀಮ್ ರಿಯಾಝ್, ಅಲಿ ಖರೇಷಿ, ಜಾವು ಪಟಕಾರ, ಬಕ್ಕು, ಬಾಬು ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
Leave a Comment