ಬೆಂಗಳೂರು : ಪ್ರೊ ಕಬ್ಬಡಿ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಟೂರ್ನಿ ನಡೆದಿರಲಿಲ್ಲ. ಆದರೆ, ಈಬಾರಿ ಡಿಸೆಂಬರ್ 22 ರಿಂದ ಪ್ರೊ ಕಬ್ಬಡಿ ಆವೃತ್ತಿ ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಬೀಯಾನ ಆರಂಭಿಸಲಿದೆ.

ಈ ಬಾರಿಯೂ ಬೆಂಗಳೂರು ಬುಲ್ಸ್ ಟೂರ್ನಿಯ ಹಾಟ್ ಫೆವರೀಟ್ ತಂಡವಾಗಿದೆ. ಬೆಂಗಳೂರು ತಂಡ ರೈಡಿಂಗ್ ಮತ್ತು ಡಿಫೆಂಡಿAAಗ್ನಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಅಲ್ ರೌಂಡರ್ಗಳು ತಂಡದ ಆಸ್ತಿಯಾಗಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಡಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಭಜ್ಲ್ ಡ್ಲೌಮಹಾಲಿ, ಜಿಯೋನ್ ಲೀ, ಜಿಯಾವುರ್ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಸೂಪರ್ ಸ್ಟಾರ್ ರೈಡರ್ ಪವನ್ ಶೆಹ್ರಾವತ್ ತಂಡ ಮುನ್ನ ಡೆಸಲಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸೀಸನ್ 8ರ ಪಂದ್ಯಗಳು ನಡೆಯಲಿದೆ. ಟೂರ್ನಿಯ ಮೊದಲಾರ್ಧದ ಶೆಡ್ಯೂಲ್ ಮಾತ್ರ ಬಿಡುಗಡೆಯಾಗಿದ್ದು, ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ ತಿಂಗಳಲ್ಲಿ 4 ಹಾಗೂ ಜನವರಿಯಲ್ಲಿ 7 ಪಂದ್ಯಗಳನ್ನು ಆಡಲಿದೆ.
Leave a Comment