ಅಂಕೋಲಾ : ತಾಲೂಕಿನ ಅಜ್ಜಿಕಟ್ಟಾ ಬಳಿ ಹೆಚ್ಚೇನು ದಾಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬಕಾರಿ ಇಲಾಖೆ ಮುಖ್ಯ ಸಿಬ್ಬಂದಿ ಹಸನ್ ಖಾನ್ ಕರೀಂ ಖಾನ್ (45) ಮೃತಪಟ್ಟಿದ್ದಾರೆ.
ಯಲ್ಲಾಪುರದವರಾಗಿದ್ದ ಅವರು ಅಂಕೋಲಾ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಮುಖ್ಯ ಮುಖ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಬುಧವಾರ ಮಧ್ಯಹ್ನ ಉಪಹಾರ ತರಲು ಹೋಗಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಹೆಚೇನು ದಾಳಿಗೆ ಈಡಾಗಿದ್ದರು.
ಅವರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ನಸುಕಿನಲ್ಲಿ ಮೃತ ಪಟ್ಟಿದ್ದಾರೆ.
Leave a Comment