ರಾಜಸ್ಥಾನ : ಭಾರತೀಯ ವಾಯುಸೇನೆಯ ಮಿಗ್ -21 ಯುದ್ಧ ವಿಮಾನ ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಯಲ್ಲಿ ಜೈಸಲ್ಮೇರ್ ಬಳಿ ಪತನವಾಗಿದ್ದು ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆ.
ಸ್ಯಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಎಸ್ ಪಿ ಅಜಯ್ ಸಿಂಗ್ ತಿಳಿಸಿದ್ದರು. ಸ್ಥಳೀಯ ಪೊಲೀಸರು ಈಗಾಗಲೇ ವಮಾನ ಅಪಘಾತ ಪ್ರದೇಶಕ್ಕೆ ಭೇಟಿ ನೀಡಿದ್ದರು. ವಿಮಾನದ ಪೈಲೆಟ್ಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.
Leave a Comment