ಧಾರವಾಡ : ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಧಾರವಾಡದಲ್ಲಿ ನಡೆದಿದ್ದು ಭಾನುವಾರ ಬೆಳಕಿಗೆ ಬಂದಿದೆ. ಘಟನೆ ಸಂಬAಧಿಸಿದAತೆ ಶಹರ ಠಾಣೆ ಪೊಲೀಸರು ಆರು ಬಾಲಕರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮೋರೆಪ್ಲಾಟ್ ಹತ್ತಿರದ 17 ವರ್ಷ ಬಾಲಕಿಯ ಮೇಲೆ ಲಕ್ಷಿö್ಮಸಿಂಗನಕೆರೆ ಪ್ರದೇಶದ ಬಾಲಕರು ನಿರಂತರ ಅತ್ಯಾಚಾರ ನಡೆಸಿದ್ದಾರೆ. ಬಾಲಕನೋರ್ವ ನೊಟ್ಟಿಗೆ ಇರುವ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದರು.
ಸುದ್ದಿ ಬಹಿರಂಗಗೊಳಿಸದAತೆ ಬೆದರಿಕೆ ಹಾಕುತ್ತಿದ್ದರು. ಇದರಿಂದ ಹೆದರಿಕೆ ಬಾಲಕಿ ಯಾರ ಮುಂದೆಯೂ ಹೇಳಿರಲಿಲ್ಲ. ಬಾಲಕರ ಕಾಟ ಸಹಿಸಿಕೊಳ್ಳಲಾಗದೇ ಕೊನೆಗೆ ಬಾಲಕಿ ತನ್ನ ಪೋಷಕರಿಗೆ ವಿಷಯ ಹೇಳಿದ್ದಾಳೆ. ಪೋಷಕರು ಶಹರಠಾಣೆಗೆ ದೂರು ನೀಡಿದ್ದು ಸದ್ಯ ಆರು ಬಾಲಕರನ್ನು ಪೊಲೀಸರು ವಿಚಾರಣೆ ನಡೆಸಿದ್ದು ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೊಳ ಪಡಿಸಿದ್ದಾರೆ.
Leave a Comment